ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು

0

ಸರಕಾರದಿಂದ ಆದೇಶ

ಅಮೃತ ಮಹೋತ್ಸವ ಆಚರಣೆಯ ಸಂಭ್ರಮದಲ್ಲಿರುವ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಕರ್ನಾಟಕ ಪಬ್ಲಿಕ್ ಸ್ಕೂಲ್ ( ಕೆಪಿಎಸ್) ಆಗಿ ಮಾರ್ಪಾಡಾಗಲಿದೆ.

ಈ ಕುರಿತುಸರಕಾರ ಆದೇಶ ಮಾಡಿದೆ. 2025 – 27 ನೇ ಸಾಲಿನಲ್ಲಿ ಎಡಿಬಿ ಸಾಲ ಯೋಜನೆ ಮತ್ತು ರಾಜ್ಯ ಅನುದಾನದಿಂದ ಕೆಪಿಎಸ್ ಶಾಲೆಗಳಾಗಿ ಉನ್ನತೀಕರಿಸಲು ಸರ್ಕಾರ ಮಂಜೂರು ಮಾಡಿರುವ ಶಾಲೆಗಳ ಪಟ್ಟಿಯಲ್ಲಿ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಸೇರಿದೆ.

ಕೆಪಿಎಸ್ ಶಾಲೆಗಳಲ್ಲಿ ಕನಿಷ್ಠ 1200 ವಿದ್ಯಾರ್ಥಿಗಳಿಗೆ ಅವಶ್ಯಕವಿರುವ ಸಮರ್ಪಕ ಮೂಲ ಸೌಕರ್ಯಗಳನ್ನು ನಿರ್ಮಿಸಲು ಪ್ರತಿ ಶಾಲೆಗೆಅಂದಾಜು 2 ರಿಂದ 4 ಕೋಟಿ ರೂಪಾಯಿಗಳನ್ನು ನೀಡಲಾಗುತ್ತದೆ. 1 ರಿಂದ 5 ಕಿಲೋಮೀಟರ್ ವ್ಯಾಪ್ತಿಯ ಒಳಗಿನ ಚಿಕ್ಕ ಸರ್ಕಾರಿ ಶಾಲೆಗಳನ್ನು ಈ ಪ್ರಸ್ತಾಪಿತ ಕರ್ನಾಟಕ ಪಬ್ಲಿಕ್ ಶಾಲೆಗಳೊಂದಿಗೆ ಸಮ್ಮಿಳಿತಗೊಳಿಸಿ ಗುಣಮಟ್ಟದ ಕಲಿಕೆ,ಶಾಲಾ ಪ್ರವೇಶ & ಶಾಲಾ ಸೇರ್ಪಡೆಗಾಗಿ ಸಮಾನ ಅವಕಾಶ ಒದಗಿಸಿರುವುದನ್ನು ಖಾತ್ರಿಪಡಿಸಿಕೊಳ್ಳಲು ಸರಕಾರ ಕೆಪಿಎಸ್ ಶಾಲೆ ರೂಪಿಸಲಾಗುವುದು.ಕೆಪಿಎಸ್ ಶಾಲೆಯಲ್ಲಿ ಎಲ್‌ಕೆಜಿಯಿಂದ 12ನೇ ತರಗತಿ ತನಕ ಒಂದೇ ಕ್ಯಾಂಪಸ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ. ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಕೆಪಿಎಸ್‌ ಆಗುವ ಸಂದರ್ಭದಲ್ಲಿ ಸಮೀಪದ ಪ್ರಾಥಮಿಕ ಶಾಲೆಯನ್ನು ಸೇರಿಸಿ, ಎಲ್‌ಕೆಜಿಯಿಂದ 12ನೇ ತರಗತಿ ತನಕ ಶಿಕ್ಷಣ ದೊರೆಯಲಿದೆ.