ಸುಳ್ಯ ಯುವಜನ ಸಂಯುಕ್ತ ಮಂಡಳಿ ಇದರ 75 ದಿನಗಳ ಸ್ವಚ್ಛತಾ ಅಭಿಯಾನದ ಪಂಚಸಪ್ತತಿ – 2025 ಅಂಗವಾಗಿ ವೀರವನಿತೆ ಕ್ರೀಡಾ ಮತ್ತು ಕಲಾ ಸಂಘ ಮಂಡೆಕೋಲು ಇವರ ವತಿಯಿಂದ 2ನೇ ಕಾರ್ಯಕ್ರಮವಾಗಿ ಮಂಡೆಕೋಲು ಶ್ರೀ ಮಹಾವಿಷ್ಣು ದೇವಸ್ಥಾನದ ವಠಾರ ಸ್ವಚ್ಛತೆ ಮತ್ತು ಪಂಚಸಪ್ತತಿ ಕಾರ್ಯಕ್ರಮ ಯಶಸ್ವಿಯಾಗಲೆಂದು ದೇವರಿಗೆ ಹಾಲು ಪಾಯಸ, ಹೂವಿನ ಪೂಜೆ ಸೇವೆಯನ್ನು ನಡೆಸಲಾಯಿತು.
















ಇದೇ ಸಂದರ್ಭದಲ್ಲಿ ಶ್ರೀ ದುರ್ಗಾದೇವಿ ಭಜನಾ ಮಂಡಳಿ ಮಂಡೆಕೋಲು ಇದರ ವತಿಯಿಂದ ಭಜನಾ ಸೇವೆ ನಡೆಯಿತು.

ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶಿವರಾಮ ಮಾಸ್ತರ್ ನಾರಾಲು, ಶುಭಕರ ಬೊಳುಗಲ್ಲು, ವಿಕಾಸ್ ಮೀನಗದ್ದೆ, ಸುಂದರ ನಾಯ್ಕ ಮೈಲೆಟ್ಟಿಪ್ಪಾರೆ, ವೇದವತಿ ಕೇನಾಜೆ, ಗ್ರಾಮ ಪಂಚಾಯತ್ ಸದಸ್ಯೆ ಪ್ರಶಾಂತಿ, ಯುವಜನ ಸಂಯುಕ್ತ ಮಂಡಳಿ ಉಪಾಧ್ಯಕ್ಷರಾದ ವಿನುತ ಪಾತಿಕಲ್ಲು, ಹಾಗೂ ವೀರವನಿತೆ ಕ್ರೀಡಾ ಮತ್ತು ಕಲಾ ಸಂಘದ ಪದಾಧಿಕಾರಿಗಳು
ಉಪಸ್ಥಿತರಿದ್ದರು.



