ಸುಳ್ಯದ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಕಿನ ಹಬ್ಬ ದೀಪಾವಳಿ

0

ಸುಳ್ಯದ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ವಿಶೇಷವಾಗಿ ಕಾಲೇಜಿನ ವಠಾರವನ್ನು ದೀಪದಿಂದ ಬೆಳಗಿಸಿ ಅಲಂಕರಿಸಲಾಯಿತು. ದೀಪಾವಳಿ ಸಮಾರಂಭವನ್ನು ದೀಪ ಬೆಳಗಿಸುವುದರ ಮೂಲಕ ಮಹಾತ್ಮ ಗಾಂಧಿ ಸ್ಮಾರಕ ಪ್ರೌಢಶಾಲೆಯ ಸಂಚಾಲಕರಾದ ದೊಡ್ಡಣ್ಣ ಬರಮೇಲುರವರು ಉದ್ಘಾಟಿಸಿ, ದೀಪಾವಳಿಯ ಸಂಭ್ರಮದ ಕ್ರಮ ಮತ್ತು ಆಚರಣೆಯ ಉದ್ದೇಶವನ್ನು ಇಂದಿನ ಮಕ್ಕಳು ತಿಳಿಯಬೇಕೆಂದು ಕರೆ ನೀಡಿದರು. ದೀಪಾವಳಿಯ ಹಿನ್ನಲೆಯ ವಿವರವನ್ನು ವಿದ್ಯಾರ್ಥಿಗಳಿಗೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘದ ಪ್ರಧಾನ ಕಾರ್ಯದರ್ಶಿಯವರಾದ ಶ್ರೀಮತಿ ಡಾ. ರೇವತಿ ನಂದನ್ ರವರ ವಹಿಸಿ ಹಿಂದಿನ ಕಾಲದ ದೀಪಾವಳಿ ಆಚರಣೆಯ ಕ್ರಮವನ್ನು ವಿದ್ಯಾರ್ಥಿಗಳಿಗೆ ತಿಳಿಸಿ, ಆಚರಣೆಯ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿನಿಯರು ದೀಪಾವಳಿಯ ಬಗ್ಗೆ ವಿಶೇಷ ನೃತ್ಯ ಪ್ರದರ್ಶನವನ್ನು ಈ ಸಂದರ್ಭದಲ್ಲಿ ನೀಡಿದರು.

ವಿದ್ಯಾರ್ಥಿಗಳು ಸಭಾಂಗಣವನ್ನು ದೀಪ ಮತ್ತು ಗೂಡು ದೀಪದಿಂದ ವಿಶೇಷವಾಗಿ ಅಲಂಕರಿಸಿ ಸಮಾರಂಭಕ್ಕೆ ಮೆರುಗನ್ನು ನೀಡಿದರು. ಹಬ್ಬದ ವಿಶೇಷ ಖಾದ್ಯವಾದ ಅವಲಕ್ಕಿ ಮತ್ತು ಬಾಳೆಹಣ್ಣನ್ನು ವಿತರಿಸಲಾಯಿತು. ಎಲ್ಲರೂ ಪಟಾಕಿಯನ್ನು ಸಿಡಿಸಿ ಹಬ್ಬವನ್ನು ಸಂಭ್ರಮಿಸಿದರು. ಸಮಾರಂಭದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಭಾರತಿ ರವರು ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ದಯಮಣಿ ಕೆ. ಸ್ವಾಗತಿಸಿ, ಗಣಿತಶಾಸ್ತ್ರ ಉಪನ್ಯಾಸಕಿ ಕುಮಾರಿ ಮೇಘಾರವರು ವಂದಿಸಿದರು. ಉಪನ್ಯಾಸಕಿಯರಾದ ಶ್ರೀಮತಿ ಕೃತಿ ಪಿ. ಎಸ್ ಮತ್ತು ಶ್ರೀಮತಿ ದೀಪ್ತಿ ಕಾರ್ಯಕ್ರಮ ನಿರ್ವಹಿಸಿದರು.