














ಸುಳ್ಯ ಕಾಯರ್ತೋಡಿಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅ.22ನೇ ಬುಧವಾರ ದಿಂದ ಮೊದಲ್ಗೊಂಡು ನ. 20ನೇ ಗುರುವಾರದ ತನಕ ವರ್ಷಂಪ್ರತಿಯಂತೆ ಒಂದು ತಿಂಗಳು ಪೂರ್ತಿ ಪ್ರತಿ ದಿನ ಸಂಜೆ ಗಂಟೆ 6.30 ರಿಂದ 7.30ರ ವರೆಗೆ ಭಜನಾ ಕಾರ್ಯಕ್ರಮದೊಂದಿಗೆ
ಕಾರ್ತಿಕ ದೀಪೋತ್ಸವ ನಡೆಯಲಿದೆ.
ಭಕ್ತಾದಿಗಳ ಹೆಸರಿನಲ್ಲಿಯೇ ದೀಪೋತ್ಸವ ನಡೆಯಲಿದ್ದು, ಭಕ್ತಾದಿಗಳು ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪೂಜಾ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ವ್ಯವಸ್ಥಾಪನಾ ಸಮಿತಿ ಮತ್ತು ಸೇವಾ ಸಮಿತಿಯವರು ವಿನಂತಿಸಿದ್ದಾರೆ.










