ಯುವಜನ ಸಂಯುಕ್ತ ಮಂಡಳಿ ಸುಳ್ಯ, ದೇವಚಳ್ಳ ಯುವಕ ಮಂಡಲ ಕಂದ್ರಪ್ಪಾಡಿ, ಶೃತಿ ಯುವತಿ ಮಂಡಲ ಕಂದ್ರಪ್ಪಾಡಿ, ಸ.ಹಿ. ಪ್ರಾ. ಶಾಲೆ ಕಂದ್ರಪ್ಪಾಡಿ, ಅಂಗನವಾಡಿ ಕೇಂದ್ರ ಕಂದ್ರಪ್ಪಾಡಿ ಇವುಗಳ ಜಂಟಿ ಆಶ್ರಯದಲ್ಲಿ ಆಯೋಜನೆ
ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ, ದಂಪತಿಗಳಿಗೆ ವಿವಿಧ ಸ್ಪರ್ಧೆಗಳು















ಯುವಜನ ಸಂಯುಕ್ತ ಮಂಡಳಿ ಸುಳ್ಯ, ದೇವಚಳ್ಳ ಯುವಕ ಮಂಡಲ ಕಂದ್ರಪ್ಪಾಡಿ, ಶೃತಿ ಯುವತಿ ಮಂಡಲ ಕಂದ್ರಪ್ಪಾಡಿ, ಸ.ಹಿ. ಪ್ರಾ. ಶಾಲೆ ಕಂದ್ರಪ್ಪಾಡಿ, ಅಂಗನವಾಡಿ ಕೇಂದ್ರ ಕಂದ್ರಪ್ಪಾಡಿ ಇವುಗಳ ಜಂಟಿ ಆಶ್ರಯದಲ್ಲಿ ನಾಳೆ (ಅ. 20) ಕಂದ್ರಪ್ಪಾಡಿಯಲ್ಲಿ ದೀಪಾವಳಿ ಪ್ರಯುಕ್ತ ‘ಗ್ರಾಮೀಣ ಕ್ರೀಡಾಕೂಟ’ ಕಂದ್ರಪ್ಪಾಡಿ ಶಾಲಾ ಮೈದಾನದಲ್ಲಿ ನಡೆಯಲಿದೆ.
ಬೆಳಿಗ್ಗೆ 9 ಗಂಟೆಗೆ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮವನ್ನು ಯುವಕ ಮಂಡಲದ ಗೌರವಾಧ್ಯಕ್ಷ ವಿನಯ ಕುಮಾರ್ ಮುಳುಗಾಡು ವಹಿಸಲಿದ್ದಾರೆ. ಕಾರ್ಯಕ್ರಮಡಾ ಉದ್ಘಾಟನೆಯನ್ನು ದೈವ ನರ್ತಕ ವಾಸು ಪರವ ಕಂದ್ರ ಪ್ಪಾಡಿ ನೆರವೇರಿಸಲಿದ್ದಾರೆ. ಬಳಿಕ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ, ದಂಪತಿಗಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ.
ಸಂಜೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಂದ್ರಪ್ಪಾಡಿ ಯುವಕ ಮಂಡಲದ ಅಧ್ಯಕ್ಷ ಉದಯ ಕುಮಾರ್ ಮುಂಡೋಡಿ ವಹಿಸಲಿದ್ದಾರೆ. ಮುಖ್ಯ ಅತಿಥಿ ಗಳಾಗಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೋಟ್ಯಾಡಿ, ಕಂದ್ರಪ್ಪಾಡಿ ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತಡ್ಕ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಡಾ. ಮಹಾಲಿಂಗೇಶ್ವರ ಭಟ್ ರವರಿಗೆ ಸನ್ಮಾನ ಕಾರ್ಯಕ್ರಮ ನೆರವೇರಲಿದೆ. ಹಾಗೂ ಸಮಗ್ರ ಕೃಷಿಕ ಪ್ರಶಸ್ತಿ ವಿಜೇತ ಮೋನಪ್ಪ ಗೌಡ ಹುಲಿಮನೆ, ಶ್ರೇಷ್ಠ ಜೇನು ಕೃಷಿಕ ಪ್ರಶಸ್ತಿ ಪುರಸ್ಕೃತ ಚೆನ್ನಕೇಶವ ಗೌಡ ಪೊಯ್ಯಮಜಲು, ಜಿಲ್ಲಾ ಮಟ್ಟದ ಕಬಡ್ಡಿ ಆಟಗಾರರಾದ ಶೋಧನ್ ರುದ್ರಚಾಮುಂಡಿ, ಪ್ರೀತಮ್ ಕಂದ್ರಪ್ಪಾಡಿ, ರಜತ್ ಗೊಳಿಯಡ್ಕ ರವರಿಗೆ ಅಭಿನಂದನೆ ನಡೆಯಲಿದೆ.










