ಬೆಂಗಳೂರಿನ ಜ್ಞಾನಮಂದಾರ ಟ್ರಸ್ಟ್ ರಜತ ಮಹೋತ್ಸವ ಆಚರಿಸುತ್ತಿದ್ದು, ಇದರ ಅಂಗವಾಗಿ ಹಾಗೂ ಕನ್ನಡ ರಾಜ್ಯೋತ್ಸವ ಅಂಗವಾಗಿ ಶಿಕ್ಷಣ, ವೈದ್ಯಕೀಯ, ಉದ್ಯಮ, ಕೃಷಿ, ಭರತ ನಾಟ್ಯ, ಸಂಗೀತ, ಯಕ್ಷಗಾನ, ಕ್ರೀಡೆ, ಸಿನಿಮಾ, ಚಿತ್ರಕಲೆ, ಸಮಾಜಸೇವೆ, ಚಿತ್ರಕಲೆ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ 12 ಮಂದಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.















ಪ್ರಶಸ್ತಿಯು ಬೆಳ್ಳಿ ಕಡಗ, ಪ್ರಶಸ್ತಿ ಪತ್ರ, ಪ್ರಶಸ್ತಿ ಫಲಕ, ಹಾರ, ಶಾಲು, ಪೇಟಾವನ್ನು ಒಳಗೊಂಡಿರುತ್ತದೆ.
ಆಸಕ್ತರು ನಿರ್ದೇಶಕರು ಜ್ಞಾನಮಂದಾರ ಟ್ರಸ್ಟ್, ಲಕ್ಷ್ಮೀ ನಿಲಯ, ಸರ್ಕಾರಿ ಆಸ್ಪತ್ರೆ ಎದುರು, ಮುಡಿಪು ದ.ಕ. ಜಿಲ್ಲೆ 574153 ಇಲ್ಲಿಗೆ ಇತ್ತೀಚಿನ ಭಾವಚಿತ್ರ ಹಾಗೂ ವೈಯಕ್ತಿಕ ವಿವರಗಳನ್ನು ನ. 05 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಮಂಗಳೂರಿನ ನೃತ್ಯಭಾರತಿ ಸಹಕಾರದೊಂದಿಗೆ ಮಂಗಳೂರಿನ ಪುರಭವನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.










