
ಪಂಚಸಪ್ತತಿ – 2025 ಸ್ವಚ್ಚತಾ ಕಾರ್ಯಕ್ರಮವನ್ನು ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು, ನೇತೃತ್ವದಲ್ಲಿ 10ನೇ ದಿನದ ಸ್ವಚ್ಚತಾ ಕಾರ್ಯಕ್ರಮವಾಗಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಸುಳ್ಯದ ಆವರಣದಲ್ಲಿ ಅ.19 ರಂದು ಮಾಡಲಾಯಿತು.
















ಈ ಸಂದರ್ಭದಲ್ಲಿ ಯುವಜನ ಸಂಯುಕ್ತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮುರಳಿ ನಳಿಯಾರು , ಸಾಂಸ್ಕೃತಿಕ ಕಾರ್ಯದರ್ಶಿ ವಿಜೇಶ್ ಹಿರಿಯಡ್ಕ, ಆಸ್ಪತ್ರೆಯ ಅಧಿಕಾರಿಗಳು ಹಾಗೂ ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ಬಿನ ಅಧ್ಯಕ್ಷರಾದ ಶ್ರೇಯಸ್ಸ್ ಮುತ್ಲಾಜೆ, ಪ್ರಧಾನ ಕಾರ್ಯದರ್ಶಿ ವಿನ್ಯಾಸ್ ಕೊಚ್ಚಿ, ಕೋಶಾಧಿಕಾರಿ ದಯಾನಂದ ಕನ್ನಡ್ಕ, ಪೂರ್ವಾಧ್ಯಕ್ಷರಾದ ಮಾಧವ ಎರ್ದಡ್ಕ, ದಯಾನಂದ ಕನ್ನಡ್ಕ ಮತ್ತು ಪದಾಧಿಕಾರಿಗಳು, ಸದಸ್ಯರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.











