ಅಡ್ತಲೆ : ಸ್ಪಂದನ ಗೆಳೆಯರ ಬಳಗದವರ ಪಂಚಸಪ್ತತಿ ಸ್ವಚ್ಛತಾ ಅಭಿಯಾನ-2025 ಮೂರನೇ ಕಾರ್ಯಕ್ರಮ

0

ಯುವಜನ ಸಂಯುಕ್ತ ಮಂಡಳಿ (ರಿ.)ಸುಳ್ಯ ಇದರ ಆಶ್ರಯದಲ್ಲಿ ಸ್ಪಂದನ ಗೆಳೆಯರ ಬಳಗ (ರಿ.) ಅಡ್ತಲೆ ಇವರ ವತಿಯಿಂದ ಪಂಚಸಪ್ತತಿ ಸ್ವಚ್ಛತಾ ಅಭಿಯಾನದ ಮೂರನೇ ಕಾರ್ಯಕ್ರಮ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯಿತು.

ಅರಂತೋಡು ಗ್ರಾಮ ಪಂಚಾಯತಿಯ ಎರಡನೇ ಹಾಗೂ ಮೂರನೇ ವಾರ್ಡಿನಲ್ಲಿ ಇರುವ 9 ಸಾರ್ವಜನಿಕ ಬಸ್ಸು ತಂಗುದಾಣಗಳ ಸ್ವಚ್ಚತೆ ಹಾಗೂ 10 ರಸ್ತೆ ಸುರಕ್ಷತಾ ಸೂಚನಾ ಫಲಕಗಳ ಸ್ವಚ್ಚತಾ ಕಾರ್ಯವನ್ನು ನಡೆಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಇವರು ಪಂಚಾಯತ್ ವತಿಯಿಂದ ಸ್ಪಂದನಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ಸ್ಪಂದನ ಗೆಳೆಯರ ಬಳಗದ ಹಾಗೂ ಚಂದನ ಯುವತಿ ಮಂಡಲ‌ದ ಸುಮಾರು 40 ಕ್ಕೂ ಮಿಕ್ಕಿ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು.