ಸುಳ್ಯ: ಕಿರಣ್ ಅಪ್ಟಿಕಲ್ಸ್ ನಲ್ಲಿ ಶ್ರೀ ಲಕ್ಷ್ಮೀಪೂಜೆ

0

ಸುಳ್ಯದ ಹಳೆ ಬಸ್ ನಿಲ್ದಾಣದ ಬಳಿ ಇರುವ ಕಿರಣ್ ಅಪ್ಟಿಕಲ್ಸ್ ನಲ್ಲಿ 4ನೇ ವರ್ಷದ ಶ್ರೀ ಲಕ್ಷ್ಮೀಪೂಜೆ ಅ. 20ರಂದು ಪುರೋಹಿತರಾದ ಪ್ರಣೀತ ವೆಂಕಟೇಶ ಶರ್ಮರ ನೇತೃತ್ವದಲ್ಲಿ ನಡೆಯಿತು.

ಸಂಸ್ಥೆಯ ಮಾಲಕರಾದ ಶ್ರೀಮತಿ ಅಖಿಲಾ ಕೆ ಮತ್ತು ಶಶಿಕಿರಣ್ ಅತಿಥಿಗಳನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ರಾಮಚಂದ್ರ ಭಟ್, ವೈಷ್ಣವಿ, ಶಿವಪ್ರಸಾದ್ ಕಲ್ಮಡ್ಕ, ಗುರುಕಾಜ್ ಬಟನ್ ನ ಆಶಾಕಿರಣ್ ರೈ, ವಿಜಯ್ ಕುಮಾರ್, ಲಕ್ಷ್ಮಿ ಹಾರ್ಡ್ವೇರ್ ನ ಭಾಸ್ಕರ್ ರೈ, ದೇವಿಪ್ರಸಾದ್ ಗುತ್ತಿನಡ್ಕ, ಸುಧಾಕರ್ ಡಿ.ಎಸ್ ಮತ್ತಿತರರು ಉಪಸ್ಥಿತರಿದ್ದರು.