ಹಳೆಗೇಟು : ಅಡ್ಕ ಬಳಿ ಮಳೆ ಬಂದರೆ ನದಿಯಂತಾಗುವ ರಸ್ತೆ

0

ವಾಹನ ಸಂಚಾರ ಬಿಡಿ ಸಾರ್ವಜನಿಕರಿಗೆ ನಡೆದಾಡಲು ಕೂಡ ಸಂಕಷ್ಟದ ಪರಿಸ್ಥಿತಿ

ಸುಳ್ಯ ನಗರ ಪಂಚಾಯತ್ ಗೆ ಸಂಬಂಧಪಟ್ಟ 5ನೇ ವಾರ್ಡಿನ ಹಳೆಗೇಟು ಅಡ್ಕ ಬಳಿ ಮಳೆ ಬಂದರೆ ರಸ್ತೆ ತುಂಬಾ ನೀರು ಹರಿದು ಹೊಳೆಯಾಗಿ ಮಾರ್ಪಾಡಾಗುತ್ತಿದೆ.

ರಸ್ತೆಯ ಎರಡು ಭಾಗದಲ್ಲಿಯೂ ಕೂಡ ಚರಂಡಿ ವ್ಯವಸ್ಥೆ ಗಳಿಲ್ಲದೆ ಮುಖ್ಯ ರಸ್ತೆಯಿಂದ ಬರುವ ಮಳೆ ನೀರು ಸುಮಾರು ಎರಡು ಅಡಿಯಷ್ಟು ಎತ್ತರಕ್ಕೆ ರಸ್ತೆಯ ತುಂಬಾ ಹರಿಯುತ್ತಿರುತ್ತದೆ.
ಇದರಿಂದಾಗಿ ವಾಹನ ಸವಾರರಿಗೆ ಕಷ್ಟದ ಪರಿಸ್ಥಿತಿಯಾಗಿದ್ದರೆ ಸಾರ್ವಜನಿಕರಿಗೆ ನಡೆದಾಡಲು ಕೂಡ ಸಾಧ್ಯವಾಗದ ರೀತಿಯಲ್ಲಿ ಪರಿಸರ ಮಾರ್ಪಾಡಾಗುತ್ತಿದೆ.
ರಾತ್ರಿ ಸಮಯದಲ್ಲಿ ಮಳೆ ಬಂದರಂತೂ ವಾಹನ ಸವಾರರ ಪಾಡು ಕೇಳುವವರಿಲ್ಲದಂತೆ ಆಗಿದೆ.

ನಗರ ಪಂಚಾಯತಿನ ಉಪಾಧ್ಯಕ್ಷರ ವಾರ್ಡಿನ ಈ ಪರಿಸ್ಥಿತಿಯನ್ನು ನೋಡಿ ಸ್ಥಳೀಯ ನಿವಾಸಿಗಳು ರಸ್ತೆಯ ಬಗ್ಗೆ ಪ್ರಶ್ನೆಯನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಎಷ್ಟೇ ಬಾರಿ ಸ್ಥಳೀಯ ಜನಪ್ರತಿನಿಧಿಗಳಿಗೆ ತಿಳಿಸಿದರು ಯಾವುದೇ ಸ್ಪಂದನೆ ಇಲ್ಲ ಎಂದು ತಮ್ಮ ಅಹವಾಲುಗಳನ್ನು ಹೇಳಿ ಕೊಳ್ಳುತ್ತಿದ್ದಾರೆ.