ಕೊಡಗು ಸಂಪಾಜೆ : ಆದರ್ಶ ಫ್ರೆಂಡ್ಸ್ ಚೆಡಾವು ವತಿಯಿಂದ 13 ನೇ ವರ್ಷದ ಗೋ ಪೂಜೆ

0

ಕೊಡಗು ಸಂಪಾಜೆಯ ಆದರ್ಶ್ ಫ್ರೆಂಡ್ಸ್ ಚಡಾವು ವತಿಯಿಂದ 13 ನೇ ವರ್ಷದ ಗೋ ಪೂಜೆ ಕಾರ್ಯಕ್ರಮವು ಅ.22 ರಂದು ಚೆಡಾವಿನಲ್ಲಿ ನಡೆಯಿತು.

ಗೋವಿಗೆ ಹೂವಿನ ಹಾರ ಸಮರ್ಪಿಸಿ ಮಾತೆಯರಿಂದ ಗೋವಿಗೆ ಆರತಿಯನ್ನು ಮಾಡಿದರು. ಬಳಿಕ ಭಾರತ ಮಾತೆಗೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವು ಉದ್ಘಾಟನೆಗೊಂಡಿತು.

ಬಳಿಕ ಸಭಾ ಕಾರ್ಯಕ್ರಮವು ಸಂಘದ ಅಧ್ಯಕ್ಷರು ಸುನಿಲ್ ಸಂಪಾಜೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ವಿಕ್ರಾಂತ್ ದೇಲಂಪಾಡಿ ಧಾರ್ಮಿಕ ಉಪನ್ಯಾಸ ಮಾಡಿ ಗೋವಿನ ಮಹತ್ವ ಮತ್ತು ಪ್ರಯೋಜನ ಹಾಗೂ ಮುಂದಿನ ದಿನಗಳಲ್ಲಿ ಗೋವಿನ ರಕ್ಷಣೆಯನ್ನು ಮುಂದಿನ ಪೀಳಿಗೆ ಮಾಡುವ ಬಗ್ಗೆ ಮನವರಿಕೆಯನ್ನು ಮುಟ್ಟಿಸಿದರು. ಕಾರ್ಯಕ್ರಮ ದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ ಹಾಗೂ ಆದರ್ಶ್ ಫ್ರೆಂಡ್ಸ್ ನ ಎಲ್ಲಾ ಪದಾಧಿಕಾರಿಗಳು ಹಾಗೂ ಮಹಿಳಾ ಪದಾಧಿಕಾರಿಗಳು ಗ್ರಾಮಸ್ಥರು ಪಾಲ್ಗೊಂಡು ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯಿತು .

ಲೀಲಾವತಿ ಕಲಾಯಿ ಪ್ರಾರ್ಥಿಸಿರಮಾ ದೇವಿ ಬಾಲಚಂದ್ರ ಕಳಗಿ ಅವರು ಸರ್ವರನ್ನು ಸ್ವಾಗತಿಸಿ , ವಂದಿಸಿ, ನಿರೂಪಿಸಿದರು.