ಐವರ್ನಾಡು ಸಹಕಾರಿ ಸಂಘದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ ಪ್ರಾರಂಭ

0

ಉತ್ತಮ ಆರೋಗ್ಯದಿಂದ ನೆಮ್ಮದಿ ಜೀವನ – ಲಕ್ಷ್ಮೀನಾರಾಯಣ ಕಣಿಪ್ಪಿಲ

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಕಂಪಾನಿಯೋ ನೆಮ್ಮದಿ ವೆಲ್ ನೆಸ್ ಸೆಂಟರ್ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರವು ಅ.10 ರಂದು ಐವರ್ನಾಡು ಸಹಕಾರಿ ಸಂಘದ ಸಭಾಭವನದಲ್ಲಿ ಉದ್ಘಾಟನೆಗೊಂಡಿತು.


ಬೆಂಗಳೂರಿನ ಉದ್ಯಮಿ ಲಕ್ಷ್ಮೀನಾರಾಯಣ ಕಣಿಪ್ಪಿಲ ದೀಪ ಬೆಳಗಿಸಿ ಉದ್ಘಾಟಿಸಿ, ಉಚಿತ ಆರೋಗ್ಯ ಸೇವೆ,ಉಚಿತ ಶಿಕ್ಷಣ ನೀಡಿದರೆ ಬಲಿಷ್ಟ ದೇಶ ನಿರ್ಮಾಣ ಸಾಧ್ಯ.
ಎಲ್ಲವನ್ನೂ ಜನರಿಗೆ ಉಚಿತವಾಗಿ ನೀಡಿದರೆ ಏನೂ ಪ್ರಯೋಜನ ಆಗದು.ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯವಾದುದು.ಮನೆಯಲ್ಲಿ ಎಲ್ಲರೂ ಆರೋಗ್ಯವಾಗಿದ್ದರೆ ನೆಮ್ಮದಿಯ ಜೀವನ ಸಾಧ್ಯ ಎಂದು ಹೇಳಿದರು.


ಉಚಿತವಾಗಿ ನೀಡುವ ಫೂಟ್ ಪಲ್ಸ್ ಥೆರಫಿ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆದುಕೊಂಡು ಆರೋಗ್ಯಪೂರ್ಣ ಜೀವನ ನಡೆಸುವಂತಾಗಲಿ ಎಂದು ಹೇಳಿದರು.
ಪುತ್ತೂರು ವೆಲ್ ನೆಸ್ ಸೆಂಟರ್ ಮಾಲಕ ಪ್ರಭಾಕರ ಸಾಲ್ಯಾನ್ ಬಾಕಿಲಗುತ್ತುರವರು ಫೂಟ್ ಪಲ್ಸ್ ಥೆರಪಿಯ ಪ್ರಯೋಜನ ಮತ್ತು ಯಾರೆಲ್ಲ ಥೆರಪಿಯ ಪ್ರಯೋಜನ ಪಡೆಯಬಹುದು ಎಂಬ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ,ಉಪಾಧ್ಯಕ್ಷ ಮಹೇಶ್ ಜಬಳೆ,ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ,ಸಂಘದ ನಿವೃತ್ತ ಲೇಖಪಾಲ ಬೆಳ್ಯಪ್ಪ ಗೌಡ ಮಡ್ತಿಲ,ಗ್ರಾ.ಪಂ.ಮಾಜಿ ಅಧ್ಯಕ್ಷ ಕೃಷ್ಣಪ್ಪ ಗೌಡ ಚೆಮ್ನೂರು,ನಿವೃತ್ತ ನೌಕರ ಪುರುಷೋತ್ತಮ ಗೌಡ ಪಿ, ಐವರ್ನಾಡು ಮುಹಿಯದ್ದೀನ್ ಜುಮಾ ಮಸೀದಿ ಉಪಾಧ್ಯಕ್ಷ ಆದಂ ವಿ.ಕೆ,ಕೃಷಿ ಸಖಿ ಶ್ರೀಮತಿ ರೇಖಾ ಉದ್ದಂಪಾಡಿ,ಐವರ್ನಾಡು ಗೌಡ ಯುವ ಸೇವಾ ಸಂಘದ ಅಧ್ಯಕ್ಷ ರಮೇಶ್ ಮಿತ್ತಮೂಲೆ,ನಿವೃತ್ತ ಬಿಎಸ್ಸೆನ್ನೆಲ್ ಉದ್ಯೋಗಿ ಬಾಲಕೃಷ್ಣ ಮಡ್ತಿಲ, ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ದೀಕ್ಷಿತ್ ಎಂ.ಎಚ್.ಸ್ವಾಗತಿಸಿ,ಸಿಬ್ಬಂದಿ ಅಜಿತ್ ನಿಡುಬೆ ಕಾರ್ಯಕ್ರಮ ನಿರೂಪಿಸಿ ,ವಂದಿಸಿದರು.
ಉಚಿತ ಶಿಬಿರವು ಅ.23 ರಿಂದ ನ.06 ರವರೆಗೆ ನಡೆಯಲಿದೆ.
ಪ್ರತೀ ದಿನ ಬೆಳಿಗ್ಗೆ ಗಂಟೆ 10 ರಿಂದ ಸಂಜೆ ಗಂಟೆ 4.00 ರವರೆಗೆ ನಡೆಯಲಿದೆ.