ರಾಜ್ಯ ಯುವ ಪ್ರಶಸ್ತಿ ವಿಜೇತ ರಂಗ ನಿರ್ದೇಶಕ ವಿದ್ದು ಉಚ್ಚಿಲ ರವರ ನಿರ್ದೇಶನದಲ್ಲಿ ಡ್ಯಾನ್ಸ್ & ಬೀಟ್ಸ್ ಬೆಳ್ಳಾರೆ ನೇತೃತ್ವದಲ್ಲಿ “ಮುದ್ರಾರಂಗ” ಚಿಣ್ಣರ ನಿರಂತರ ಯಾನ ಮಕ್ಕಳ ರಂಗ ನಾಟಕ ತಂಡ ಬೆಳ್ಳಾರೆ ಇದರ ಮೊದಲ ಮೆಗಾ ಶೋ. ನಾಟಕ “ಗೊಂಬೆರಾವಣ” ಅಕ್ಟೋಬರ್ 18 ರಂದು ಪೆರುವಾಜೆಯ ಜೆ.ಡಿ. ಆಡಿಟೋರಿಯಂನಲ್ಲಿ ಪ್ರದರ್ಶನಗೊಂಡಿತು.

ನಾಟಕದ ಮೊದಲು ಸಭಾ ಕಾರ್ಯಕ್ರಮ ಮತ್ತು ನಾಟಕ ರಚನೆಯ ವಿವಿಧ ರಂಗಗಳಲ್ಲಿ ದುಡಿದ ಕಲಾವಿದರನ್ನು ಗೌರವಿಸಲಾಯಿತು. ಸಭಾ ಕಾರ್ಯಕ್ರಮವನ್ನು ಕಲ್ಮಡ್ಕ ರಂಗ ಸುರಭಿಯ. ನಿನಾಸಂ ಪದವಿಧರರಾದ ಮಹಾಭಲ ಕಲ್ಮಡ್ಕ ಉದ್ಘಾಟಿಸಿ – ಮಕ್ಕಳಿಗೆ ರಂಗ ತರಬೇತಿಯ ಅವಶ್ಯಕತೆಯನ್ನು ವಿವರಿಸಿ. ನಾಟಕ ತಂಡಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆರುವಾಜೆ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಜಗನ್ನಾಥ ಪೂಜಾರಿ ಮುಕ್ಕೂರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕ ಮತ್ತು ಹಿರಿಯ ರಂಗ ನಿರ್ದೇಶಕ ಆರ್.ಕೆ ಭಾಸ್ಕರ ಬಾಳಿಲ, ಅಜಪಿಲ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆ, ಜೆ.ಡಿ ಆಡಿಟೋರಿಯಂ ನ ಮಾಲಕ ಪದ್ಮನಾಭ ಶೆಟ್ಟಿ ಪೆರುವಾಜೆ ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಮಕ್ಕಳ ನಾಟಕ ತಂಡಕ್ಕೆ ಶುಭಹಾರೈಸಿದರು.
















ಈ ಸಂದರ್ಭದಲ್ಲಿ ನಾಟಕ ತಂಡದ ರಚನೆಯಲ್ಲಿ, ವಿವಿಧ ವಿಷಯಗಳಲ್ಲಿ ಸಹಕರಿಸಿದ ದಿವಾಕರ್ ಕಟೀಲ್, ರಾಜ್ ಮುಖೇಶ್ ಸುಳ್ಯ, ಶಿವರಾಮ್ ಕಲ್ಮಡ್ಕ, ಸುದೀಶ್ ಕಾಸರಗೋಡು, ಮಧು ಉಜಿರೆ, ರಂಜನ್ ಬೆಳ್ಳಾರೆ, ಹರೀಶ್ ರೈ ಕಲ್ಲಗದ್ದೆ, ಗಣೇಶ್ ಮಠತ್ತಡ್ಕ, ದಾಮೋದರ ಬೆಳ್ಳಾರೆ ಇವರನ್ನು ಗೌರವಿಸಲಾಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಕೃಷ್ಣಪ್ರಿಯಾ ಕಳತ್ತಜೆ ಪ್ರಾರ್ಥಿಸಿ, ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕ ಮತ್ತು ತಂಡದ ಪೋಷಕ ಲೋಕೇಶ್ ಬೆಳ್ಳಿಗೆ ಸ್ವಾಗತಿಸಿ, ಶಿಕ್ಷಕಿ ಮತ್ತು ಪೋಷಕಿ ನಳಿನಾಕ್ಷಿ .ಎಸ್ ರೈ ಎಣ್ಣೂರುಗುತ್ತು ವಂದಿಸಿದರು. ಡ್ಯಾನ್ಸ್ & ಬೀಟ್ಸ್ ಬೆಳ್ಳಾರೆ ತಂಡದ ನಿರ್ದೇಶಕ ಜೀವನ್ ಟಿ. ಎನ್ ಮತ್ತು ತಂಡದ ಪೋಷಕ ಸುಜಿತ್ ರೈ ಪಟ್ಟೆ ಸಹಕರಿಸಿದರು. ಸಭಾ ಕಾರ್ಯಕ್ರಮದ ನಂತರ ರಂಗ ನಾಟಕ ತರಭೇತಿ ಪಡೆದ 13 ಮಕ್ಕಳ, ವಿವಿಧ 7 ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳ ಮನೋಜ್ಞ ಅಭಿನಯದ, ಆಕರ್ಷಕ ವೇಷಭೂಷಣ ಮತ್ತು ಪರಿಕರಗಳ “ಗೊಂಬೆರಾವಣ” ರಂಗ ನಾಟಕ, ಸೇರಿದ ಕಲಾಭಿಮಾನಿಗಳ ಮನಸೂರೆಗೊಂಡಿತ್ತು. ಕಾರ್ಯಕ್ರಮದಲ್ಲಿ “ಮುದ್ರಾರಂಗ” ನಾಟಕ ತಂಡದ ಸಂಘಟನೆಯ ನೇತೃತ್ವವನ್ನು ವಹಿಸಿದ ಪೋಷಕ ಸುಜಿತ್ ರೈ ಪಟ್ಟಿಯವರನ್ನು ಡ್ಯಾನ್ಸ್ & ಬೀಟ್ಸ್ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ನಾಟಕ ಪ್ರದರ್ಶನದ ನಂತರ ಅಭಿನಯಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ಶಾಲೆಗಳ ನಿವೃತ್ತ ಮತ್ತು ಪ್ರಸ್ತುತ ಅಧ್ಯಾಪಕರುಗಳು ಮತ್ತು ಗಣ್ಯರು ಸ್ಮರಣಿಕೆ ನೀಡಿ ಹರಸಿದರು. ಮುದ್ರಾರಂಗ ತಂಡದ ಪೋಷಕರು ವಿವಿಧ ಕೆಲಸ ಕಾರ್ಯಗಳಲ್ಲಿ ಸಹಕರಿಸಿದರು.
ಶಶಿಕಲಾ ಸೌಂಡ್ಸ್ ನ ಪ್ರಶಾಂತ್ ಕಳಂಜ ಅತ್ಯುತ್ತಮ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.










