ಸಮೃದ್ದಿ ಮಾರ್ಟ್ ಗ್ರಾಹಕರಿಗೆ ಪ್ರೋತ್ಸಾಹ ಧನ ವಿತರಣೆಗೆ ಚಾಲನೆ















ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಧಾನ ಕಚೇರಿಯಲ್ಲಿ ಗಣಹೋಮ ಮತ್ತು ಲಕ್ಷ್ಮಿ ಪೂಜಾ ಕಾರ್ಯಕ್ರಮವು ಅ.೨೦ರಂದು ನಡೆಯಿತು.
ಈ ಸಂದರ್ಭದಲ್ಲಿ ಸಹಕಾರ ಸಂಘ ಪ್ರವರ್ತಿತ ಸಮೃದ್ದಿ ಮಾರ್ಟ್ ಅರಂತೋಡು ವತಿಯಿಂದ ೨೦೨೪-೨೫ನೇ ಆರ್ಥಿಕ ವರ್ಷದಲ್ಲಿ ವ್ಯವಹಾರ ಮಾಡಿದ ಗ್ರಾಹಕರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರೋತ್ಸಾಹ ಧನ ವಿತರಣಾ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿತರಣೆಗೆ ಚಾಲನೆ ನೀಡಲಾಯಿತುಹಾಗೂ ಗ್ರಾಹಕರ ನಿರಂತರ ಸಹಕಾರ ಮತ್ತು ಬೆಂಬಲಕ್ಕಾಗಿ ಆಡಳಿತ ಮಂಡಳಿ ವತಿಯಿಂದ ಧನ್ಯವಾದ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಉಪಾಧ್ಯಕ್ಷ ಡಾ.ಲಕ್ಷ್ಮೀಶ ಕಲ್ಲುಮುಟ್ಲು, ಸಮೃದ್ದಿ ಮಾರ್ಟ್‌ನ ಅಧ್ಯಕ್ಷ ದಯಾನಂದ ಕುರುಂಜಿ, ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.










