ಯುವಜನ ಸಂಯುಕ್ತ ಮಂಡಳಿ ಸುಳ್ಯ, ವೀರವನಿತೆ ಕ್ರೀಡಾ ಮತ್ತು ಕಲಾ ಸಂಘ ಮಂಡೆಕೋಲು, ಗ್ರಾಮ ಪಂಚಾಯತ್ ಮಂಡೆಕೋಲು ಇದರ ವತಿಯಿಂದ ಪಂಚಸಪ್ತತಿ 4 ನೆಯ ಕಾರ್ಯಕ್ರಮ ಉದ್ಯೋಗ ಖಾತರಿ ಯೋಜನೆಯಡಿ ತೋಡಿನ ಹೂಳು ಎತ್ತುವ ಕಾಯಕ ತಂಡದ ಮಹಿಳೆಯರಿಗೆ ಮಹಿಳೆಯರ ಆರೋಗ್ಯ,ಶುಚಿತ್ವ ದ ಬಗ್ಗೆ ಮಾಹಿತಿ ಕಾರ್ಯಗಾರ ಪಾತಿಕಲ್ಲು ಹರಿಶ್ಚಂದ್ರ ಗೌಡರ ಮನೆಯಲ್ಲಿ ನಡೆಯಿತು .

ಕಾರ್ಯಕ್ರಮದಲ್ಲಿ ಮಾಹಿತಿಯನ್ನು ನೀಡಲು ಡಾ. ನಂದಕುಮಾರ್ ಆಗಮಿಸಿ ಮಹಿಳೆಯರ ಮುಟ್ಟಿನ ಸಮಸ್ಯೆ , ಗರ್ಭಧಾರಣೆ , ಋತುಸ್ರಾವ ದ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಶುಚಿತ್ವ ಎಲ್ಲದರ ಬಗ್ಗೆ ಮಾಹಿತಿಯನ್ನು ನೀಡಿದರು.
















ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷರಾದ ಪವನ್ ಪಲ್ಲತ್ತಡ್ಕ ಪಂಚಸಪ್ತತಿ ಯ ಉದ್ದೇಶಗಳ ಬಗ್ಗೆ ಮಾತನಾಡಿ ಕಾಯಕ ತಂಡದ ಮಹಿಳೆಯರನ್ನು ಶ್ಲಾಘಿಸಿದರು.

ವೇದಿಕೆಯಲ್ಲಿ ಮನೆಯ ಹಿರಿಯರಾದ ಕರುಣಾಕರ ಗೌಡ ಪಾತಿಕಲ್ಲು, ನರೇಗಾ ಯೋಜನೆಯ ಸಿಬ್ಬಂದಿ ಕಿರಣ, ವೀರವನಿತೆ ಕ್ರೀಡಾ ಮತ್ತು ಕಲಾ ಸಂಘದ ಅಧ್ಯಕ್ಷರಾದ ವಸಂತಿ ಉಗ್ರಾನೀಮನೆ ಉಪಸ್ಥಿತರಿದ್ದರು. ಕಾರ್ಯಕ್ರಮ ದಲ್ಲಿ ಯುವಜನ ಸಂಯುಕ್ತ ಮಂಡಳಿ ಕೋಶಾಧಿಕಾರಿ ಲೋಹಿತ್ , ಉಪಾಧ್ಯಕ್ಷರುಗಳಾದ ದಯಾನಂದ ಪಾತಿಕಲ್ಲು, ವಿನುತ ಪಾತಿಕಲ್ಲು, ನಿರ್ದೇಶಕ ವಿಜೇಶ್ ಹಿರಿಯಡ್ಕ , ಮಂಡೆಕೋಲು ಕೃಷಿ ಪತ್ತಿನ ಸಹಕಾರ ಸಂಘ ದ ನಿರ್ದೇಶಕರಾದ ಲಕ್ಷ್ಮಣ ಉಗ್ರಾನಿಮನೆ ,

ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಕೆಮ್ಮನಬಳ್ಳಿ , ಪಾತಿಕಲ್ಲು ಕುಟುಂಬಸ್ಥರು , ವೀರವನಿತೆ ಕ್ರೀಡಾ ಮತ್ತು ಕಲಾ ಸಂಘದ ಪದಾಧಿಕಾರಿಗಳು , ಹಾಗೂ ನರೇಗಾ ಯೋಜನೆಯ ಸಿಬ್ಬಂದಿ ನೀಮಾ , ಹಾಗೂ ನರೇಗಾ ಕಾಯಕ ಮಿತ್ರರು ಇದ್ದರು .ವಿನುತ ಪಾತಿಕಲ್ಲು ಸ್ವಾಗತಿಸಿ ಸರೋಜಿನಿ ಮಾವಂಜಿ ಧನ್ಯವಾದ ಹೇಳಿದರು.










