ಮೋನಪ್ಪ ಗೌಡ ದರ್ಖಾಸ್ತು, ಚಾರ್ಮತ ಹೃದಯಾಘಾತದಿಂದ ನಿಧನ

0

ನಾಲ್ಕೂರು ಗ್ರಾಮದ ಚಾರ್ಮತ ನಿವಾಸಿ ಮೋನಪ್ಪ ಗೌಡ ದರ್ಖಾಸ್ತು ಅವರು ಇಂದು ಹೃದಯಾಘಾತದಿಂದ ನಿಧನರಾದರೆಂದು ತಿಳಿದು ಬಂದಿದೆ.

ಇಂದು ಮನೆಯಲ್ಲಿ ಚಯರ್ ನಲ್ಲಿ ಕುಳಿತಿರುವಾಗಲೇ ಹೃದಯಾಘಾತಗೊಂಡು ಬಿದ್ದು ಮೃತಪಟ್ಟಿದ್ದಾರೆ. ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತಾದರೂ ಅದಾಗಲೇ ಅವರು ಮೃತ ಪಟ್ಟಿದ್ದಾರೆ ಎನ್ನಲಾಗಿದೆ. ಅವರಿಗೆ 48 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಯಮುನಾ, ಪುತ್ರಿ ಜಸ್ಮಿ, ಪುತ್ರ ಮೋಹಿತ್, ಸಹೋದರಾದ ಪದ್ಮಯ ಗೌಡ, ಭಾಸ್ಕರ ಗೌಡ, ಸಹೋದರಿ ಶ್ರೀಮತಿ ಕೋಮಲಾಂಗಿ ಗೋಪಾಲಕೃಷ್ಣ ಪಾರೆಮಜಲು, ಶ್ರೀಮತಿ ಕುಸುಮಾವತಿ ಧರ್ಣಪ್ಪ ಆಡಿಪ್ಪು ಪುತ್ತೂರು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ