2025 ರ ಮಕ್ಕಳ ಹಕ್ಕುಗಳ ಮಾಸೋತ್ಸವ ತಾಲೂಕು ಮಟ್ಟದ ಕಾರ್ಯಕ್ರಮದ ಪೂರ್ವಭಾವಿ ಸಭೆ
ಸುಳ್ಯ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಮಕ್ಕಳ ಹಕ್ಕುಗಳ ಮಾಸೋತ್ಸವ 2025 ತಾಲೂಕು ಮಟ್ಟದ ಕಾರ್ಯಕ್ರಮ ನಡೆಸುವ ಬಗ್ಗೆ ಪೂರ್ವಭಾವಿ ಸಭೆ ಅ 25 ರಂದು ಸುಳ್ಯ ಶಿವ ಕೃಪ ಕಲಾಮಂದಿರದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿಯ ಸಂಚಾಲಕ ಶಂಕರ್ ಪೆರಾಜೆ ಯವರು ವಹಿಸಿದ್ದರು.

ವೇದಿಕೆಯಲ್ಲಿ ಸುಳ್ಯ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷರಾದ ಹಸೈನಾರ್ ಜಯನಗರ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸುಜಾತ ಕದಿಕಡ್ಕ, ಉಪಾಧ್ಯಕ್ಷ ನಜೀರ್ ಶಾಂತಿನಗರ, ಜಿಲ್ಲಾ ಸಮಿತಿ ಸದಸ್ಯ ಹಾಗೂ ತರಬೇತುದಾರ ನಾರಾಯಣ ಕಿಲಂಗೋಡಿ ಉಪಸ್ಥಿತರಿದ್ದರು.















ಮಾಸೋತ್ಸವ ಸಮಿತಿಯ ಉಪ ಸಂಚಾಲಕರುಗಳಾಗಿ ಅಶೋಕ್ ಪೀಚೆ,ಚಿದಾನಂದ ಕಾಯರ್ತೋಡಿ, ನಜೀರ್ ಶಾಂತಿನಗರ,ಅಬ್ದುಲ್ಲಾ ಅಜ್ಜಾವರ, ಶ್ರೀಮತಿ ಲತಾ ರೈ, ಹಾಗೂ ಶ್ರೀಮತಿ ಲಲಿತಾ ಚಂದ್ರಶೇಖರ್ ಇವರನ್ನು ಆಯ್ಕೆ ಮಾಡಲಾಯಿತು.
ಮಸೋತ್ಸವದ ಪ್ರಾರಂಭೋತ್ಸವವನ್ನು ನವಂಬರ್ ಮೊದಲ ವಾರದಲ್ಲಿ ಅಜ್ಜಾವರ ಗ್ರಾಮದಲ್ಲಿ ಚಾಲನೆ ನೀಡಿ ತಾಲೂಕಿನ ಬೇರೆ ಬೇರೆ ಗ್ರಾಮಗಳಲ್ಲಿ ಕಾರ್ಯಕ್ರಮವನ್ನು ನೀಡುವ ಮೂಲಕ ಡಿಸೆಂಬರ್ ಕೊನೆಯ ವಾರದಲ್ಲಿ ಸುಳ್ಯ ನಗರದಲ್ಲಿ ಸಮಾರೋಪ ಗೊಳಿಸುವ ಬಗ್ಗೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ತಾಲೂಕು ಸಮಿತಿಯ ಸದಸ್ಯರುಗಳಾದ ಉನೈಸ್ ಪೆರಾಜೆ, ಶ್ರೀಮತಿ ಮಂಜುಳಾ ಬಡಿಗೇರ್, ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಣ ಸಂಪನ್ಮೂಲ ಕೇಂದ್ರದ ತಾಲೂಕು ಸಮಿತಿ ಅಧ್ಯಕ್ಷ ಹಸೈನಾರ್ ಜಯನಗರ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು.ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸುಜಾತ ವಂದಿಸಿದರು.










