ಮೋನಪ್ಪ ಗೌಡ ಮುಚ್ಚಾರರವರ ವೈಕುಂಠ ಸಮಾರಂಭ

0

ಇತ್ತೀಚೆಗೆ ನಿಧನರಾದ ಬಾಳುಗೋಡು ಗ್ರಾಮದ ಮೋನಪ್ಪ ಗೌಡ ಮುಚ್ಚಾರ ಅವರ ವೈಕುಂಠ ಸಮಾರಂಭ ಮೃತರ ಮನೆ ಕೊತ್ನಡ್ಕ ಮುಚ್ಚಾರ ಮನೆಯಲ್ಲಿ ಅ.24 ರಂದು ನಡೆಯಿತು. ಮೃತರ ಬಗ್ಗೆ ಚಂದ್ರಹಾಸ ಶಿವಾಲ ನುಡಿನಮನ ಅರ್ಪಿಸಿದರು. ಸೇರಿದ್ದ ಬಂಧುಗಳು ಒಂದು ನಿಮಿಷದ ಮೌನ ಪ್ರಾರ್ಥನೆ ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಮೃತರ ಮನೆಯವರು, ಕುಟುಂಬಸ್ಥರು, ಬಂಧುಗಳು ಉಪಸ್ಥಿತರಿದ್ದರು.