ನ್ಯಾಯದ ಪರಿಕಲ್ಪನೆ ಪ್ರವಾದಿ ಮಹಮ್ಮದರ ಶಿಕ್ಷಣದ ಬೆಳಕಿನಲ್ಲಿ ರಾಜ್ಯವ್ಯಾಪ್ತಿ ಅಭಿಯಾನ















ಜಮಾಅತೆ ಇಸ್ಲಾಮೀ ಹಿಂದ್ ಸುಳ್ಯ ಇದರ ವತಿಯಿಂದ ನ್ಯಾಯದ ಹರಿಕಾರ ಪೈಗಂಬರ್ ಮಹಮ್ಮದ್ (ಸ)ರಾಜ್ಯವ್ಯಾಪ್ತಿ ಅಭಿಯಾನದ ಪ್ರಯುಕ್ತ ಸಾರ್ವಜನಿಕ ವಿಚಾರಗೋಷ್ಠಿ ನ್ಯಾಯದ ಪರಿಕಲ್ಪನೆ ಪ್ರವಾದಿ ಮಹಮ್ಮದ್ ಶಿಕ್ಷಣದ ಬೆಳಕಿನಲ್ಲಿ ಎಂಬ ವಿಷಯದಲ್ಲಿ ನ.1 ರಂದು ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಜಮಾಅತ್ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಕುಂಞಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ ವಿ ಚಿದಾನಂದ, ಸಾಹಿತಿ ಪೂವಪ್ಪ ಕಣಿಯೂರು,ಚಾರ್ಟರ್ಡ್ ಅಕೌಂಟೆಂಟ್ ಗಣೇಶ್ ಭಟ್,ಕರ್ನಾಟಕ ಸರಕಾರ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬಲಡ್ಕ,ಸಾಹಿತಿ ಎ.ಕೆ ಹಿಮಕರ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಜಮಾಅತೆ ಇಸ್ಲಾಮೀ ಹಿಂದ್ ಸುಳ್ಯ ಘಟಕ ಸದಸ್ಯರು ತಿಳಿಸಿದ್ದಾರೆ










