
ದುಗ್ಗಲಡ್ಕದ ಮಿತ್ರ ಯುವಕ ಮಂಡಲ ಕೊಯಿಕುಳಿ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ಅಗಲಿದ ಬಾಬು ನಾಯ್ಕ ನೀರಬಿದಿರೆಯವರಿಗೆ ಯುವಕ ಮಂಡಲ ಮತ್ತು ಕುರಲ್ ತುಳುಕೂಟ ದುಗ್ಗಲಡ್ಕ ಇದರ ವತಿಯಿಂದ ಶ್ರದ್ಧಾಂಜಲಿ ಸಮರ್ಪಣೆ ಮತ್ತು ನುಡಿನಮನ ಕಾರ್ಯಕ್ರಮ ಅ.25ರಂದು ಯುವಕ ಮಂಡಲದ ಕಟ್ಟಡದಲ್ಲಿ ನಡೆಯಿತು.
ಬಾಬು ನಾಯ್ಕರವರ ಭಾವಚಿತ್ರದ ಮುಂದೆ ಕುರಲ್ ತುಳುಕೂಟದ ಪೂರ್ವಾಧ್ಯಕ್ಷರಾದ ಬಾಲಕೃಷ್ಣ ನಾಯರ್ ನೀರಬಿದಿರೆ ದೀಪ ಬೆಳಗಿಸಿದರು.
















ಬಳಿಕ ಕುರಲ್ ತುಳುಕೂಟದ ಸಂಚಾಲಕ ಕೆ.ಟಿ.ವಿಶ್ವನಾಥ,ಅಧ್ಯಕ್ಷ ರಮೇಶ್ ನೀರಬಿದಿರೆ, ನ.ಪಂ.ಮಾಜಿ ಅಧ್ಯಕ್ಷೆ ಶ್ರೀಮತಿ ಶೀಲಾವತಿ ಮಾಧವ ನುಡಿನಮನ ಸಲ್ಲಿಸಿದರು. ಬಾಬು ನಾಯ್ಕರವರ ಸಹೋದರ ವಿಶ್ವನಾಥ ನೀರಬಿದಿರೆ ಮಾತನಾಡಿದರು. ವೇದಿಕೆಯಲ್ಲಿ ಕುರಲ್ ತುಳುಕೂಟದ ಗೌರವಾಧ್ಯಕ್ಷೆ ನವ್ಯ ದಿನೇಶ್ ಮೂಡೆಕಲ್ಲು, ಯುವಕ ಮಂಡಲದ ಅಧ್ಯಕ್ಷ ತೀರ್ಥರಾಮ ಕೊಯಿಕುಳಿ,ಕೋಶಾಧಿಕಾರಿ ಚಂದ್ರನ್ ಕೂಟೇಲು ಉಪಸ್ಥಿತರಿದ್ದರು. ಕುರಲ್ ತುಳುಕೂಟದ ಕಾರ್ಯದರ್ಶಿ ಭಾಗೀಶ್ ಕೆ.ಟಿ.ಸ್ವಾಗತಿಸಿದರು.
ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.










