ಕುಕ್ಕೆ ಸುಬ್ರಹ್ಮಣ್ಯದಲ್ಲಿ ಉರಿಯದ ಬೀದಿದೀಪಗಳು: ಸಾರ್ವಜನಿಕರ ಅಕ್ರೋಶ

0

ಕೆಲವೇ ದಿನಗಳಲ್ಲಿ ಸರಿಯಾಗಲಿದೆ : ಕಾರ್ಯನಿರ್ವಾಹಣಾಧಿಕಾರಿ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ಹಲವು ಕಡೆ ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಸುಬ್ರಹ್ಮಣ್ಯದ ಕಾಶಿಕಟ್ಟೆ ವೃತ್ತ ಹಾಗೂ ರಥಬೀದಿಯ ಮುಖ್ಯ ವೃತ್ತದ ಬಳಿ, ಕೆಲ ಪಾರ್ಕಿಂಗ್ ಸ್ಥಳಗಳಲ್ಲಿ ಬೀದಿ ದೀಪಗಳು ಉರಿಯದೆ ಹಲವು ದಿನಗಳೇ ಕಳೆದಿವೆ. ಕರೆಂಟ್ ಹೋದ ವೇಳೆ ಪರ್ಯಾಯ ವ್ಯವಸ್ಥೆಯೂ ಇಲ್ಲದೆ ಇದರ ಬಗ್ಗೆ ಯಾರೊಬ್ಬರೂ ಗಮನ ಹರಿಸದೇ ಇರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.


ಇದಲ್ಲದೆ ಪಾರ್ಕಿಂಗ್ ಸ್ಥಳಗಳಲ್ಲಿ ಸಿ.ಸಿ ಕ್ಯಾಮರಾಗಳು ಇಲ್ಲದಿರುವುದು
ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ. ಬೀದಿ ದೀಪಗಳ ಬಗ್ಗೆ ದೇವಾಲಯ ಕಾರ್ಯನಿರ್ವಹಣಾ ಅರವಿಂದ ಅಯ್ಯಪ್ಪ ಸುತಗುಂಡಿ, ಅವರಲ್ಲಿ ಕೇಳಿದಾಗ ಸಿಡಿಲು ಆಘಾತದಿಂದಾಗಿ ಕೆಲ ಬೀದಿ ದೀಪಗಳು ಹೋಗಿ ಸಮಸ್ಯೆಯಾಗಿದೆ. ದುರಸ್ತಿ ಮಾಡಲು ಸೂಚಿಸಲಾಗಿದೆ. ಕೆಲವೇ ದಿನಗಳಲ್ಲಿ ಎಲ್ಲ ಬೀದಿ ದೀಪಗಳೂ ಸರಿಯಾಗಲಿವೆ ಎಂದಿದ್ದಾರೆ.