ಮಡಪ್ಪಾಡಿ ಗೌಡ ಕ್ರೀಡಾ ಸಮಿತಿಯಿಂದ ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭೇಟಿ

0

ಮಡಪ್ಪಾಡಿಯ ಗೌಡ ಕ್ರೀಡಾ ಸಮಿತಿ ನಿಯೋಗದಿಂದ ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ಅ.26 ರಂದು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.


ನ.08 ಮತ್ತು 09 ರಂದು ಮಡಪ್ಪಾಡಿಯಲ್ಲಿ ನಡೆಯುವ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟದ ಪೋಸ್ಟರ್ ನಿಖಿಲ್ ಕುಮಾರಸ್ವಾಮಿಯವರು ವೀಕ್ಷಿಸಿ ಪಂದ್ಯಾಟಕ್ಕೆ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ, ಜಾತ್ಯತೀತ ಜನತಾದಳದ ವಿದ್ಯಾರ್ಥಿ ಮುಂದಾಳು ನಿಹಾಲ್ ಎಸ್ ಕೋಡ್ತುಗುಳಿ, ಗೌಡ ಕ್ರೀಡಾ ಸಮಿತಿ ಮಡಪ್ಪಾಡಿ ಇದರ ಅಧ್ಯಕ್ಷರಾದ ಸುಮಂತ್ ಶೀರಡ್ಕ, ಸಂಚಾಲಕರಾದ ವೇಣುಗೋಪಾಲ್ ಶೀರಡ್ಕ ಹಾಗೂ ದುಷ್ಯಂತ್ ಶೀರಡ್ಕ ಜತೆಗಿದ್ದರು.