ಅರೆಭಾಷೆ ನಾಟಕ ಉತ್ತಮವಾಗಿ ಮೂಡಿಬರಲಿದೆ – ಸದಾನಂದ ಮಾವಜಿ
ಕರ್ನಾಟಕ ಅರೆಭಾಷೆ ಮತ್ತು ಸಾಹಿತ್ಯ ಅಕಾಡೆಮಿ ಮಡಿಕೇರಿ ಪ್ರಸ್ತುತ ಪಡಿಸುವ ಅರೆಭಾಷೆ ನಾಟಕ ನಿರ್ಮಾಣ ಮತ್ತು ರಂಗ ತರಬೇತಿಯ ಉದ್ಘಾಟನಾ ಕಾರ್ಯಕ್ರಮವು ಅ.27 ರಂದು ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ ನಡೆಯಿತು.

ಕರ್ನಾಟಕ ಅರೆಭಾಷೆ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯರಾದ ಜಯಪ್ರಕಾಶ್ ಮೋಂಟಡ್ಕರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಕರ್ನಾಟಕ ಅರೆಭಾಷೆ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ “ಅರೆಭಾಷೆಯಲ್ಲಿ ನಡೆಯಲಿರುವ ನಾಟಕ ಒಳ್ಳೆಯ ಸಾಂಸಾರಿಕ ಕಥೆಯನ್ನು ಬಿಂಬಿಸಲಿದೆ.ಉತ್ತಮ ಕಲಾವಿದರ ಆಯ್ಕೆ ನಡೆದು ನಾಟಕ ಪ್ರಾಯೋಗಿಕವಾಗಿ ನಡೆದ ಬಳಿಕ ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳಲಿದೆ” ಎಂದು ಹೇಳಿ ಎಲ್ಲರ ಸಹಕಾರ ಕೋರಿದರು.
















ವೇದಿಕೆಯಲ್ಲಿ ರಂಗ ತರಬೇತುದಾರ ಮಹೇಶ್ ಆಚಾರಿ ಹೊನ್ನಾವರ,ಕರ್ನಾಟಕ ಅರೆಭಾಷೆ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಹಾಗೂ ನಾಟಕ ಸಂಚಾಲಕ ಚಂದ್ರಶೇಖರ ಪೇರಾಲು,ಯೋಗ ತರಬೇತುದಾರರಾದ ಶಿಕ್ಷಕಿ ಸುನಂದ ಶೆಟ್ಟಿ,ನಾಟಕ ನಿರ್ದೇಶಕ ಲೋಕೇಶ್ ಊರುಬೈಲು ಉಪಸ್ಥಿತರಿದ್ದು ಅರೆಭಾಷೆ ನಾಟಕ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದರು.
ಅಕಾಡೆಮಿ ಸದಸ್ಯ ವಿನೋದ್ ಮೂಡಗದ್ದೆ ಕಾರ್ಯಕ್ರಮ ನಿರೂಪಿಸಿ,ಲೋಕೇಶ್ ಊರುಬೈಲು ವಂದಿಸಿದರು.










