ಸುಳ್ಯ ಕಸಬಾದ ನಿವಾಸಿ
ಪಿ. ಎಲ್ ಡಿ ಬ್ಯಾಂಕಿನ ನಿವೃತ್ತ ಉದ್ಯೋಗಿ ಆನಂದ ಗೌಡ ಜೆ ರವರು ಅಲ್ಪ ಕಾಲದ ಅಸೌಖ್ಯದಿಂದ ಇಂದು (ಅ. 28) ಮುಂಜಾನೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು.















ಮೃತರು ತಾಯಿ ಶ್ರೀಮತಿ ಭಾನುಮತಿ, ಪುತ್ರ ಚೇತನ್,ಪುತ್ರಿ ಶ್ರೀಮತಿ ಚೈತ್ರ ರಮೇಶ್, ಸೊಸೆ ಶ್ರೀಮತಿ ಭವ್ಯ ಮತ್ತು ಇಬ್ಬರು ಸಹೋದರರನ್ನು, ಐದು ಮಂದಿ ಸಹೋದರಿಯರನ್ನು ಹಾಗೂ ಮೊಮ್ಮಕ್ಕಳನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರು ಸುದೀರ್ಘ 35 ವರ್ಷಗಳ ಕಾಲ ಸುಳ್ಯದ ಪ್ರಾಥಮಿಕ ಕೃಷಿ ಪತ್ತಿನ ಭೂ ಅಭಿವೃದ್ಧಿ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ 8 ವರ್ಷಗಳ ಹಿಂದೆ ವೃತ್ತಿಯಿಂದ ವಯೋ ನಿವೃತ್ತಿ ಹೊಂದಿದ್ದರು.










