ಸಂಪೂರ್ಣ ಹದಗೆಟ್ಟ ಪೊಳೆಂಜ-ಪಾಂಡಿಗದ್ದೆ- ಕಂಬಳ ರಸ್ತೆ

0

ಸುದ್ದಿಯೊಂದಿಗೆ ಕಷ್ಟ ಹೇಳಿಕೊಂಡ ಊರವರು

ಸಂಬಂಧಪಟ್ಟವರು ಸ್ಪಂದಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ

ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಪೊಳೆಂಜ-ಪಾಂಡಿಗದ್ದೆ – ಕಂಬಳ ರಸ್ತೆಯ ಮಧ್ಯೆ ಭಾಗ ಮಳೆ ನೀರಿಗೆ ಸಂಪೂರ್ಣ ಕೊಚ್ಚಿ ಹೋಗಿದೆ. ಇದೇ ರಸ್ತೆ ಮುಂದಕ್ಕೆ ಕಂಬಳ-ಕರಿಕ್ಕಳ ಸಂಪರ್ಕಿಸುತ್ತದೆ. ಇಲ್ಲೂ ಹಲವು ಕಡೆ ತೀರಾ ಹದಗೆಟ್ಟಿದೆ.

ಅನೇಕ ಬಾರಿ ಗ್ರಾಮ ಪಂಚಾಯತ್ ಗಮನಕ್ಕೆ ತಂದರೂ ಸರಿ ಪಡಿಸಿಲ್ಲ ಎಂದು ಅಸಮಾಧಾನಗೊಂಡ ಊರವರೆಲ್ಲ ಸೇರಿ ಸುದ್ದಿಯೊಂದಿಗೆ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ.

ತಾಲೂಕಿನ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ‌ಸರಕಾರಿ ಕಿ. ಪ್ರಾ. ಶಾಲೆ ಇಲ್ಲೇ ಇದೆ. ಆದರೆ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಬರಲು ರಸ್ತೆ ಸರಿ ಇಲ್ಲದೆ ಕಷ್ಟ ಪಡುತ್ತಿದ್ದೇವೆ. ಹಿಂದೆ ಎಸ್. ಅಂಗಾರರು ಶಾಸಕರಾಗಿದ್ದಾಗ ಈ ರಸ್ತೆಗೆ 10 ಲಕ್ಷ ರೂ ಅನುದಾನವನ್ನು ಇಟ್ಟಿದ್ದರು. ಆದರೆ ಅದನ್ನು ಬೇರೆ ಕಡೆ ದುರಸ್ತಿಗೆ ಬಳಸಿರುವುದು ತಿಳಿದು ಬಂದಿದೆ. ಅನಾರೋಗ್ಯವಾದಾಗ ತುರ್ತು ಸೇವೆಗೆ ಅಂಬ್ಯುಲೆನ್ಸ್ ತರಿಸಲು ಸಾಧ್ಯವಿಲ್ಲ ಎಂದು ಅಹವಾಲು ಹೇಳಿಕೊಂಡ ಊರವರು ಪಂಚಾಯತ್ ಆಡಳಿತ ಮತ್ತು ಸ್ಥಳೀಯ ಪ್ರತಿನಿಧಿಗಳ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು.

ಒಂದು ವಾರದೊಳಗೆ ಸ್ಪಂದಿಸದಿದ್ದರೆ ಪಕ್ಷಾತೀತವಾಗಿ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸುತ್ತೇವೆ‌. ರಸ್ತೆ ಸರಿಪಡಿಸುವ ತನಕ ಚುನಾವಣೆ ಬಹಿಷ್ಕಾರ ನಡೆಸುತ್ತೇವೆ ಎಂದು ಫಲಾನುಭವಿಗಳು ಹೇಳಿದರು.

ದಯಾನಂದ ಕಂಬಳ, ಆದರ್ಶ ದೊಡ್ಡಮನೆ, ದುಗ್ಗಪ್ಪ ದೊಡ್ಡಮನೆ, ಸತೀಶ್ ಭಟ್ ಬೇರಿಕೆ, ಗ್ರಾ.ಪಂ. ಸದಸ್ಯ ಲಕ್ಷ್ಮಣ ಬೊಳ್ಳಾಜೆ, ಜಮಾಲುದ್ದೀನ್ ಪೊಳೆಂಜ, ಜಿನ್ನಪ್ಪ ಕೋಟ್ಯಡ್ಕ, ಕುಶಾಲಪ್ಪ ಗೌಡ ದೊಡ್ಡಮನೆ, ಸುಚಿನ್ನ ಕಾಣಿಕೆ, ದೀಪಕ್ ಪೂಜಾರಿಮನೆ, ರವಿ ಚಳ್ಳಕೋಡಿ, ತಾರಾನಾಥ ಚಳ್ಳಕೋಡಿ, ದೇವಪ್ಪ ಚಳ್ಳಕೋಡಿ, ರತನ್ ಶೇಡಿಗುಂಡಿ, ಪದ್ಮನಾಭ ಕರಿಮಜಲು, ಅಜಯ್ ಕಂರ್ಬು, ಕೀರ್ತನ್ ಚಳ್ಳಕೋಡಿ,ಚೇತನ್ ಚಳ್ಳಕೋಡಿ, ಕುಸುಮಾಧರ ಕರಿಮಜಲು, ವೆಂಕಟೇಶ್ವರ ಕಂರ್ಬು, ಹನೀಫ್ ಪೊಳೆಂಜ, ಇಬ್ರಾಹಿಂ ಪೊಳೆಂಜ, ಮಹೇಶ್ ಕೋಟೆ, ವೀರಪ್ಪ ಕಂಬಳ, ವೀರಪ್ಪ ಗೌಡ ಪೂಜಾರಿ ಮನೆ, ರಾಘವ ಕಾಣಿಕೆ, ನವೀನ್ ಶೇಡಿಗುಂಡಿ, ಇಸ್ಮಾಯಿಲ್ ಪೊಳೆಂಜ, ಧರ್ಮಪಾಲ ಪಾಂಡಿಗದ್ದೆ, ಚೆನ್ನಕೇಶವ ಪೂಜಾರಿ ಮನೆ, ರತ್ನಾವತಿ ದೊಡ್ಡಮನೆ, ಉಷಾ ಕಂಬಳ, ಜಗದೀಶ್ ಕಂರ್ಬು, ಇಬ್ರಾಹಿಂ ಪೊಳೆಂಜ, ಜಯರಾಮ ಮೇಲ್ಪಾಡಿ, ದೇವದಾಸ್ ಚಳ್ಳಕೋಡಿ, ಭರತ್, ದೇವಿಪ್ರಸಾದ್ ದೊಡ್ಡಮನೆ, ನಾರ್ಣಪ್ಪ ಕಂರ್ಬು, ಇಕ್ಬಾಲ್ ಪೊಳೆಂಜ, ಹೊನ್ನಪ್ಪ ಕಂರ್ಬು, ಸಿರಾಜುದ್ದೀನ್, ಯತೀಶ್ ಪೂಜಾರಿ ಮನೆ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.