ಡಾ.ರೇಣುಕಾ ಪ್ರಸಾದ್ ರವರಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ಬೆಳ್ಳಿರಥ ಸಮರ್ಪಣೆ

0

ಬೆಳ್ಳಿರಥದ ಸ್ವಾಗತಕ್ಕೆ ಗುತ್ತಿಗಾರಿನಲ್ಲಿ ಪೂರ್ವಭಾವಿ ಸಭೆ

ಪ್ರಸಿದ್ಧ ಪುಣ್ಯಕ್ಷೇತ್ರವಾದ ಕುಕ್ಕೆಶ್ರೀ ಸುಬ್ರಹ್ಮಣ್ಯಕ್ಕೆ ಡಾ.ರೇಣುಕಾ ಪ್ರಸಾದ್ ಕೆ.ವಿ.ಮತ್ತು ಮನೆಯವರು ಬೆಳ್ಳಿರಥ ಸಮರ್ಪಣೆ ಮಾಡಲಿದ್ದು, ರಥವು ಸಾಗಿಬರುವ ರಸ್ತೆಯ ಗುತ್ತಿಗಾರಿನಲ್ಲಿ ಪೇಟೆಯಲ್ಲಿ ಅದ್ದೂರಿ ಸ್ವಾಗತ ಮಾಡುವ ಬಗ್ಗೆ ಪೂರ್ವಭಾವಿ ಸಭೆ ಅ.28ರಂದು ಗುತ್ತಿಗಾರಿನ ಮುತ್ತಪ್ಪೇಶ್ವರ ದೈವಸ್ಥಾನದಲ್ಲಿ ನಡೆಯಿತು.
ರಥವು ನ.5ರಂದು ಸುಳ್ಯದಿಂದ ಹೊರಟು ಸೋಣಂಗೇರಿ, ದುಗ್ಗಲಡ್ಕ, ಗುತ್ತಿಗಾರು ಮೂಲಕ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತಲುಪಲಿದೆ.

ಪೂರ್ವಭಾವಿ ಸಭೆಗೆ ಆಗಮಿಸಿದ ರಥ ಸಮರ್ಪಣಾ ಸಮಿತಿಯ ಪ್ರಮುಖರು,ನ್ಯಾಯವಾದಿ ದಿನೇಶ್ ಮಡಪ್ಪಾಡಿ , ಡಾ.ಜ್ಯೋತಿ ಆರ್ ಪ್ರಸಾದ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಎಒಎಲ್ಇ ಕಮಿಟಿ ಬಿ ಇದರ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ, ಕುಕ್ಕೆ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮೋಹನರಾಮ್ ಸುಳ್ಳಿ, ಯಶೋದಾ ರಾಮಚಂದ್ರ, ವೆಂಕಟ್ ದಂಬೆಕೋಡಿ, ಜಯಪ್ರಕಾಶ್ ಮೊಗ್ರ, ದೊಡ್ಡಣ್ಣ ಬರೆಮೇಲು, ಪಿ.ಎಸ್ ಗಂಗಾಧರ, ವಿಜಯಕುಮಾರ್ ಎಂ.ಡಿ, ನಿಶಿತ್ ಮುಂಡೋಡಿ, ರಾಧಾಕೃಷ್ಣ ತುಪ್ಪದಮನೆ, ರಾಘವ ಆರ್ನೋಜಿ,, ವಸಂತ ಕಿರಿಭಾಗ, ದೇವಿಪ್ರಸಾದ್ ಕುದ್ಪಾಜೆ, ಜಯಂತ ತಳೂರು, ಮತ್ತಿತರರು ಉಪಸ್ಥಿತರಿದ್ದರು.