ಕಡಬ ಗೌಡ ಸಂಘಕ್ಕೆ ಡಾ.ಕೆ.ವಿ.ಚಿದಾನಂದರಿಂದ 50 ಲಕ್ಷ ರೂ. ದೇಣಿಗೆ

0

ಕಡಬದ ಒಕ್ಕಲಿಗ ಗೌಡ ಸೇವಾ ಸಂಘದವರು ಕಡಬದಲ್ಲಿ ಬೃಹತ್ ಗೌಡ ಸಮುದಾಯ ಭವನವನ್ನು ನಿರ್ಮಿಸುತ್ತಿದ್ದು, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರು ಅ.29 ರಂದು ತನ್ನ 70 ನೇ ವರ್ಷದ ಹುಟ್ಟುಹಬ್ಬದ ಸಂದರ್ಭ ಅದಕ್ಕೆ ರೂ.50 ಲಕ್ಷ ದೇಣಿಗೆ ನೀಡಿದರು. ಕಡಬ ಗೌಡ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು, ಶ್ರೀಮತಿ ಆಶಾ ತಿಮ್ಮಪ್ಪ, ತಿಮ್ಮಪ್ಮ ಗೌಡ ಕುಂಡಡ್ಕ, ಗೌರವ ಸಲಹೆಗಾರ ಜನಾರ್ದನ ಗೌಡ ಪಣೆಮಜಲು, ಚಂದ್ರಶೇಖರ ಕೋಡಿಬೈಲು, ಡಾ.ಶಿವಕುಮಾರ್ ಹೊಸೊಳಿಕೆ, ಅಶೋಕ್, ಪ್ರವೀಣ್ ಕುಂಟ್ಯಾನ ಮತ್ತಿತರರು ಚೆಕ್ ಸ್ವೀಕಾರ ಸಂದರ್ಭದಲ್ಲಿ ಉಪಸ್ಥಿತರಿದ್ದರು.