ಜೇಸಿಐ ಪಂಜ ಪಂಚಶ್ರೀ: ಜೇಸಿ ಸಪ್ತಾಹ-2025

0


ಕೌಟುಂಬಿಕ ತರಬೇತಿ ಕಾರ್ಯಾಗಾರ


ಜೇಸಿಐ ಪಂಜ ಪಂಚಶ್ರೀ ಇದರ ಜೇಸಿ ಸಪ್ತಾಹ-2025 ಪ್ರಯುಕ್ತ ನಾಲ್ಕನೇ ದಿವಸದ ಕಾರ್ಯಕ್ರಮ “ಜೀವನವನ್ನು ಸಂಭ್ರಮಿಸಿ” ಕೌಟುಂಬಿಕ ತರಬೇತಿ ಕಾರ್ಯಾಗಾರ ಅ.29 ರಂದು ಪಂಜ ಲಯನ್ಸ್ ಭವನದಲ್ಲಿ ನಡೆಯಿತು.


ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ JFM ವಾಚಣ್ಣ ಕೆರೆಮೂಲೆ ಸಭಾಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜೇಸಿಐ ಭಾರತ ವಲಯ-15 ರ ವಲಯಾಧ್ಯಕ್ಷ Jc Sen ಅಭಿಲಾಷ್ ಬಿ ಎ, ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ Lion ನಾಗೇಶ್ ತೆಂಕಪ್ಪಾಡಿ, ತರಬೇತುದಾರ ಜೇಸಿಐ ಭಾರತ, ವಲಯ ತರಬೇತುದಾರ ದಾಮೋದರ ಪಾಟಾಳಿ, ಜೇಸಿಐ ಪಂಜ ಪಂಚಶ್ರೀ ನಿಕಪೂರ್ವಾಧ್ಯಕ್ಷ JFM ಜೀವನ್ ಮಲ್ಕಜೆ, ಸ್ಥಾಪಕಾಧ್ಯಕ್ಷ JFM ದೇವಿಪ್ರಸಾದ್ ಜಾಕೆ,ಕಾರ್ಯದರ್ಶಿ JFM ಅಶ್ವಥ್ ಬಾಬ್ಲುಬೆಟ್ಟು ಸಪ್ತಾಹ ನಿರ್ದೇಶಕ JFM ದೇವಿ ಪ್ರಸಾದ್ ಚಿಕ್ಮುಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವಲಯಾಧ್ಯಕ್ಷ Jc Sen ಅಭಿಲಾಷ್ ಬಿ ಎ
ರವರನ್ನು ಘಟಕದ ವತಿಯಿಂದ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ JFM ಜೀವನ್ ಶೆಟ್ಟಿಗದ್ದೆ ವೇದಿಕೆಗೆ ಆಹ್ವಾನಿಸಿದರು. JFM ವಾಚಣ್ಣ ಕೆರೆಮೂಲೆ ಸ್ವಾಗತಿಸಿದರು.JC ಷಣ್ಮುಖ ಕಟ್ಟ ಜೇಸಿ ವಾಣಿ
ವಾಚಿಸಿದರು. JFM ಅಶ್ವಥ್ ಬಾಬ್ಲುಬೆಟ್ಟು ವಂದಿಸಿದರು.