ಹಿರಿಯರ ಕ್ರೀಡಾಕೂಟದಲ್ಲಿ ಶ್ರೀಮತಿ ಸರಸ್ವತಿ ಕಾಮತ್ ರಾಜ್ಯಮಟ್ಟಕ್ಕೆ ಆಯ್ಕೆ

0

ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಅ. 19ರಂದು ಜರುಗಿದ 22ನೇ ಜಿಲ್ಲಾ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಶ್ರೀಮತಿ ಸರಸ್ವತಿ ಕಾಮತ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
50+ ವಯೋಮಾನದಲ್ಲಿ ಚಕ್ರ ಎಸೆತದಲ್ಲಿ ಪ್ರಥಮ, ಗುಂಡೆಸೆತ ಮತ್ತು ಈಟಿ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು 2025 ಡಿಸೆಂಬರ್ 20 ಮತ್ತು 21ರಂದು ಕೋಲಾರದಲ್ಲಿ ಜರಗುವ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿರುತ್ತಾರೆ. ಡಿಸೆಂಬರ್ 5 ರಿಂದ 10ರ ತನಕ ಚೆನ್ನೈಯಲ್ಲಿ ನಡೆಯಲಿರುವ ಏಷ್ಯನ್ ಮೀಟ್ ನಲ್ಲೂ ಇವರು ಭಾಗವಹಿಸಿದ್ದಾರೆ