ಬೆಡ್ ರೂಂ ಸೆಟ್, ಟಾಪ್ ಲೋಡ್ ವಾಷಿಂಗ್ ಮೆಷಿನ್, ಸೋಫಾ ಸೆಟ್ ಪಡೆದ ಅದೃಷ್ಟಶಾಲಿ ಗ್ರಾಹಕರು
ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿ ವ್ಯವಹರಿಸುತ್ತಿರುವ ಅಡ್ಕಾರ್ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಮಳಿಗೆಯಲ್ಲಿ ಅಡ್ಕಾರ್ ಮಹೋತ್ಸವ ಹಾಗೂ ದೀಪಾವಳಿ ಧಮಾಕದ ಪ್ರಯುಕ್ತ ಹಮ್ಮಿಕೊಂಡ ಲಕ್ಕಿ ಕೂಪನ್ ಬಂಪರ್ ಡ್ರಾಅ. 30 ರಂದು ಸಂಜೆ ನಡೆಯಿತು.
















ಪ್ರಥಮವಾಗಿ 6 ನೇ ವಾರದ ಲಕ್ಕಿ ಕೂಪನ್ ಡ್ರಾವನ್ನು ಹಿರಿಯ ಉದ್ಯಮಿ ಕೃಷ್ಣ ಕಾಮತ್, ವೖದ್ಯರಾದ
ಡಾ. ಎಂ. ಎನ್. ಕೃಷ್ಣ ಭಟ್, ಕೃಷಿಕರಾದ ಕುಶಾಲಪ್ಪ ಗೌಡ ಕುಕ್ಕೆಟ್ಟಿ ಹಾಗೂದೀಪಾವಳಿ ಧಮಾಕದ ಬಂಪರ್ ಬಹುಮಾನದ ಪ್ರಥಮ ಡ್ರಾ ವನ್ನು ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಉದ್ಯಮಿ ಅಬ್ದುಲ್ ಹಮೀದ್ ಹಾಗೂ ಯುವಉದ್ಯಮಿ ಹರಿರಾಯ ಕಾಮತ್, ಶ್ರೀಮತಿ ಶಾರದಾ ಎಸ್ ರೈ ಗುಂಡ್ಯ ರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಉದ್ಯಮಿ ಅನೂಪ್ ಪೈ ಪಾಪ್ಯುಲರ್,
ಎಂ. ಎನ್ಸ್ ಟೈಲರ್ಸ್ ಮಾಲಕ ಗೋಕುಲ್ ದಾಸ್, ನ್ಯೂಮ ಕ್ರೀಮ್ ಪಾರ್ಲರ್ ಮಾಲಕ ಆಲಿ, ಕೆ. ವಿ. ಜಿ ಸಂಸ್ಥೆಯ ಉದ್ಯೋಗಿ ರಜತ್ ಅಡ್ಕಾರ್ ಉಪಸ್ಥಿತರಿದ್ದರು.
ಈ ವಾರದ ಲಕ್ಕಿ ಕೂಪನ್ ನಲ್ಲಿ ಪ್ರಥಮ ಬಹುಮಾನ
ಮೋಹನ್ ಕುಮಾರ್ ಕಜೆಮೂಲೆ, ಚಂದ್ರಕಲಾ ಎ. ಎಮ್ ಅಡ್ಪಂಗಾಯ, ತ್ರಿಶಿಕಾ ಗುತ್ತಿಗಾರು ರವರು ಪಡೆದುಕೊಂಡರು.
ದೀಪಾವಳಿ ಧಮಾಕದ ಬಂಪರ್ ಬಹುಮಾನದ ಅದೃಷ್ಟಶಾಲಿಗಳಾಗಿ ಪ್ರಥಮ ಜಾಲ್ಸೂರು ಗ್ರಾಮದ ಕೆ. ಎಸ್. ಕಾಮತ್ ಅಡ್ಕಾರ್, ದ್ವಿತೀಯ ಐವರ್ನಾಡು ಗ್ರಾಮದ ದಯಾನಂದ ಸಿ. ಎಸ್ ಚೆಮ್ನೂರು, ತೃತೀಯ ಕನಕಮಜಲು ಗ್ರಾಮದ ಪುನೀತ್ ಮೂರ್ಜೆ ಯವರು ಆಯ್ಕೆಯಾದರು.
ಮಳಿಗೆಯ ಮಾಲಕರಾದ ದಿನೇಶ್ ಅಡ್ಕಾರ್ ಮತ್ತು ಶ್ರೀಮತಿ ಚೈತ್ರ ರವರು ಎಲ್ಲರನ್ನು ಸ್ವಾಗತಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮಳಿಗೆಯ ಸಿಬ್ಬಂದಿ ವರ್ಗದವರು ಸಹಕರಿಸಿದರು.










