ಸುದ್ದಿ ವತಿಯಿಂದ ನಡೆದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮ

0

ಷರಾ ಪ್ರಕಾಶನ ಮತ್ತು ಸುದ್ದಿ ಸಮೂಹ ಸಂಸ್ಥೆ ವತಿಯಿಂದ ನಡೆದ ದೇಶಭಕ್ತಿಗೀತೆ ಗುಂಪುಗಾಯನ ಸ್ಪರ್ಧೆ ಹಾಗೂ ಸುದ್ದಿ ಬಿಡುಗಡೆ ದೀಪಾವಳಿ ವಿಶೇಷಾಂಕದ ಸೂಪರ್ ಜೋಡಿ ಸ್ಪರ್ಧೆ, ಮುದ್ದು ಕಂದ ಫೊಟೋ ಸ್ಪರ್ಧೆ, ಹಾಗೂ ಬಲಿಯೇಂದ್ರ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ಅ. ೩೧ರಂದು ಸುಳ್ಯದ ರಂಗಮಯೂರಿ ಕಲಾಕೇಂದ್ರದಲ್ಲಿ ನಡೆಯಿತು.


ಸುದ್ದಿ ಬಿಡುಗಡೆ ವಾರಪ್ರತಿಕೆ ಸಂಪಾದಕ ಹರೀಶ್ ಬಂಟ್ವಾಳ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ ಸೈಂಟ್ ಬ್ರಿಜಿಡ್ಸ್ ಚರ್ಚ್‌ನ ಧರ್ಮಗುರು ಫಾ. ಓಲ್ವಿನ್ ಎಡ್ವರ್ಡ್ ಡಿ.ಕುನ್ಹ, ಹಿರಿಯ ಸಾಹಿತಿ ನಾಗಪ್ಪ ಕುತ್ಯಾಳ, ಷರಾ ಪ್ರಕಾಶನದ ಡಾ. ಜಯವಾಣಿ ಲೀಲಾಧರ್, ದೀಕ್ಷಾ ಟ್ರೇಡರ್‍ಸ್‌ನ ಮಾಲಕ ಮಾಧವ ರಾವ್, ಆಸ್ತಾ ಸ್ಟುಡಿಯೋದ ಶಶಿ ಗೌಡ, ಸ್ವರ್ಣಂ ಜ್ಯುವೆಲ್ಸ್‌ನ ಪಾಲುದಾರ ಪ್ರವೀಣ್ ಗೌಡ, ಸಫಲ ಉದ್ಯಮದ ಪಾಲುದಾರ ಸತೀಶ್ ಹೊದ್ದೆಟ್ಟಿ, ಶಿಕ್ಷಕಿ ಹೇಮಲತಾ ಗಣೇಶ್ ಕಜೆಗದ್ದೆ, ಪ್ರೆಸ್‌ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಉಪಸ್ಥಿತರಿದ್ದು, ಶುಭಹಾರೈಸಿದರು.


ಸ್ಪರ್ಧಾ ವಿಜೇತರು :


ದೇಶಭಕ್ತಿಗೀತೆ ಗುಂಪುಗಾಯನ ಸ್ಪರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ರೋಟರಿ ಪ್ರೌಢಶಾಲೆ ಸುಳ್ಯ, ದ್ವಿತೀಯ ಸುಳ್ಯ ಸೈಂಟ್ ಜೋಸೆಫ್ ಪ್ರೌಢಶಾಲೆ, ಕಾಲೇಜು ವಿಭಾಗದಲ್ಲಿ ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸುಳ್ಯ ಪ್ರಥಮ, ಸುಬ್ರಹ್ಮಣ್ಯ ಕುಮಾರಸ್ವಾಮಿ ಪದವಿ ಪೂರ್ವ ಕಾಲೇಜು ದ್ವಿತೀಯ, ಸಾರ್ವಜನಿಕ ವಿಭಾಗದಲ್ಲಿ ಸಾಹಿತ್ಯ ಸಂಗೀತ ಕಲಾ ಕೇಂದ್ರ ಸುಳ್ಯ ಪ್ರಥಮ, ಕಲಾ ಗ್ರಾಮ ಕಲ್ಮಡ್ಕ ದ್ವಿತೀಯ ಸ್ಥಾನ ಪಡೆದುಕೊಂಡರು.


ಸುದ್ದಿ ಬಿಡುಗಡೆ ದೀಪಾವಳಿ ವಿಶೇಷಾಂಕದ ಸೂಪರ್ ಜೋಡಿ ಸ್ಪರ್ಧೆಯಲ್ಲಿ ಮಿಲನ್ ಪಾತಿಕಲ್ಲು ಹಾಗೂ ಡಾ. ಶ್ರೀರಕ್ಷಾ ಎ.ಎಸ್. ಪ್ರಥಮ, ಪ್ರಶಾಂತ್ ದೊಡ್ಡಮನೆ ಹಾಗೂ ಅಕ್ಷತಾ ಕಲ್ಲಪಳ್ಳಿ ದ್ವಿತೀಯ, ಶಶಿಕಾಂತ್ ಮಿತ್ತೂರು ಹಾಗೂ ಜಸ್ಮಿತಾ ತೃತೀಯ ಸ್ಥಾನ ಪಡೆದುಕೊಂಡರು. ಮುದ್ದು ಕಂದ ಫೊಟೋ ಸ್ಪರ್ಧೆಯಲ್ಲಿ ಬಾಳಿಲ ಬೊಳ್ಯಕಂಡದ ಅನಿಕೇತನ್ ಮತ್ತು ವನಿತಾ ದಂಪತಿಗಳ ಪುತ್ರಿ ರಿಯಾಂಶಿಕ ಎ. ಪ್ರಥಮ, ದೇವಚಳ್ಳದ ಅಪೂರ್ವ ಅಚ್ರಪ್ಪಾಡಿ ಮತ್ತು ತೃಪ್ತಿ ದಂಪತಿಗಳ ಪುತ್ರಿ ಧಿಯಾನ್ಶಿ ದ್ವಿತೀಯ, ಸುಳ್ಯ ಕಿರಣಕುಟೀರದ ಕೆ.ಎಸ್.ಗುರುಪ್ರಸಾದ್ ಮತ್ತು ಅರ್ಚನಾ ದಂಪತಿಗಳ ಪುತ್ರ ವಿವಿಧ್ ನಾಗಪ್ಪ ತೃತೀಯ ಸ್ಥಾನ ಪಡೆದುಕೊಂಡರು.


ಬಲಿಯೇಂದ್ರ ಪುಜಾ ಸ್ಪರ್ಧೆಯಲ್ಲಿ ಚಿನ್ನಮ್ಮ ಮೂಲೆಮಜಲು ಪ್ರಥಮ, ಗೋವಿಂದ ನಾಯ್ಕ ದ್ವಿತೀಯ ಪಡೆದುಕೊಂಡರು. ಸುದ್ದಿ ದೀಪಾವಳಿ ಸಂಚಿಕೆಯ ಮುಖಪುಟ ರೂಪದರ್ಶಿ ದೇವಿಕಾ ಗೌಡರವರನ್ನು ಇದೇ ಸಂದರ್ಭ ಗುರುತಿಸಿ ಗೌರವಿಸಲಾಯಿತು.


ಬಲಿಯೇಂದ್ರ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪುರುಷೋತ್ತಮ ಸೇವಾಜೆಯವರಿಗೆ ಪ್ರೋತ್ಸಾಹಕ ಬಹುಮಾನ ನೀಡಿದ ಹೇಮಲತಾ ಕಜೆಗದ್ದೆ


ಸುದ್ದಿ ಏರ್ಪಡಿಸಿದ ಬಲಿಯೇಂದ್ರ ಅಲಂಕಾರ ಸ್ಪರ್ಧೆಯಲ್ಲಿ ಹತ್ತಾರು ಮನೆಯವರು ಭಾಗವಹಿಸಿದ್ದರು. ಆದರೆ ಒಂದು ಮನೆಯಲ್ಲಿ ತಂದೆ ಅಸೌಖ್ಯದಿಂದ ಬಳಲುತ್ತಿದ್ದರೂ , ಮನೆಯಲ್ಲಿ ಬಡತನವಿದ್ದರೂ ಮನೆ ಮಕ್ಕಳು ಉತ್ಸಾಹದಿಂದ ತಮಗೆ ಸಾಧ್ಯವಾಗುವ ರೀತಿಯಲ್ಲಿ ಬಲಿಯೇಂದ್ರ ನೆಟ್ಟು ಅಲಂಕಾರ ಮಾಡಿದ್ದರು. ಈ ಕಾಳಜಿಯನ್ನು ಗಮನಿಸಿ ತೀರ್ಪುಗಾರರಾದ ಹೇಮಲತಾ ಕಜೆಗದ್ದೆಯವರು ತಮ್ಮ ವೈಯಕ್ತಿಕ ನೆಲೆಯಲ್ಲಿ ಆ ಮನೆಯವರಿಗೆ ಪ್ರೋತ್ಸಾಹಕ ಬಹುಮಾನ ನೀಡಲು ಬಯಸಿದ್ದಾರೆ. ಅದನ್ನು ಸುದ್ದಿ ಸಂಸ್ಥೆಗೆ ಅವರು ಹಸ್ತಾಂತರಿಸಿದರು. ಪರುಷೋತ್ತಮ ಸೇವಾಜೆ ಅವರ ಪುತ್ರಿ, ಪ್ರೌಢಶಾಲಾ ವಿದ್ಯಾರ್ಥಿನಿ ಮೌಲ್ಯ ಈ ಬಹುಮಾನಕ್ಕೆ ಭಾಜನರಾಗಿದ್ದಾರೆ.

ಶ್ರೀಮತಿ ಚೈತ್ರಾ ವಿನಯ್ ಪ್ರಾರ್ಥಿಸಿ, ವರದಿಗಾರ ಈಶ್ವರ್ ವಾರಣಾಸಿ ಸ್ವಾಗತಿಸಿದರು. ಜಾಹೀರಾತು ವಿಭಾಗದ ಮುಖ್ಯಸ್ಥ ರಮೇಶ್ ನೀರಬಿದಿರೆ ವಂದಿಸಿದರು. ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.