ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ರವರ ನಿರ್ದೇಶನದ ಮೇರೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು ಹಾಗೂ ಅಧೀನ ಕಾರ್ಯನಿರ್ವಹಿಸುತ್ತಿರುವ ತಾಲೂಕು ಕಾನೂನು ಸೇವಾ ಸಮಿತಿ ಸುಳ್ಯ ಇವರ ಕಾರ್ಯವ್ಯಾಪ್ತಿಯಲ್ಲಿ ಅರೇ ಕಾನೂನು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.















ಶಿಕ್ಷಕರು / ನಿವೃತ್ತ ಶಿಕ್ಷಕರು, ವಿವಿಧ ಇಲಾಖೆಯ ನಿವೃತ್ತ ಸರ್ಕಾರಿ ನೌಕರರು ಮತ್ತು ಹಿರಿಯನಾಗರಿಕರು, MSW ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಮಾಜಿ ಪಂಚಾಯತ್ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು / ಆಶಾಕಾರ್ಯಕರ್ತೆಯರು, ವೈಧ್ಯರು ಮತ್ತು ಮಾಜಿ ಸೈನಿಕರು, ವಿದ್ಯಾರ್ಥಿಗಳು ಮತ್ತು ಕಾನೂನು ಪದವಿ ವಿದ್ಯಾರ್ಥಿಗಳು, ಸಮಾಜ ಸೇವೆಯಲ್ಲಿ ತೊಡಗಿರುವ ಎನ್.ಜಿ.ಓ ಮತ್ತು ಕ್ಲಬ್ ಗಳ ಸದಸ್ಯರು (ರಾಜಕೀಯೇತರನ್ನು ಹೊರತುಪಡಿಸಿ), ಮೈತ್ರಿ ಸಂಘಗಳು, ಮಹಿಳಾ ನೆರೆಹೊರೆಯ ಗುಂಪುಗಳು, ಅಂಚಿನಲ್ಲಿರುವ/ದುರ್ಬಲ ಗುಂಪುಗಳು ಸೇರಿದಂತೆ ಇತರ ಸ್ವ ಸಹಾಯ ಗುಂಪುಗಳ ಸದಸ್ಯರು, ಮಹಿಳೆಯರು, ತೃತೀಯ ಲಿಂಗಿಯವರು, ವಿಧವೆಯರು, ಬುಡಕಟ್ಟು ಸಮೂದಾಯದ ವ್ಯಕ್ತಿಗಳು ಮತ್ತು ಜೈಲಿನಲ್ಲಿ ದೀರ್ಘಾವಧಿಯ ಶಿಕ್ಷೆಯನ್ನು ಅನುಭವಿಸುತ್ತಿರುವ ಉತ್ತಮ ನಡತೆಯುಳ್ಳ ವಿದ್ಯಾವಂತ ಖೈದಿಗಳು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ Para Legal Volunteers ಗಳಾಗಿ ಗುರುತಿಸಲು ಸೂಕ್ತವೆಂದು ಭಾವಿಸುವ ಯಾವುದೇ ಇತರ ವ್ಯಕ್ತಿಗಳು ಇವರನ್ನು ಅರೇಕಾಲೀಕ ಕಾನೂನು ಸ್ವಯಂ ಸೇವಕರು ಅಂತ ಕಾರ್ಯನಿರ್ವಹಿಸಲು ನೇಮಕ ಮಾಡಿಕೊಳ್ಳಬೇಕಾಗಿರುವುದರಿಂದ, ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ಸೇವಾ ಮನೋಭಾವನೆ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಸುಳ್ಯ ತಾಲೂಕು ಕಾನೂನು ಸೇವಾ ಸಮಿತಿಯಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ನವೆಂಬರ್ 7, 2025 ರೊಳಗಾಗಿ ಖುದ್ದಾಗಿ ಕಚೇರಿಗೆ ಸಲ್ಲಿಸಬೇಕೆಂದು ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.










