ಸಂಪಾಜೆಯಲ್ಲಿ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಸಮಿತಿ ಸಭೆ

0

ಕಾಂಗ್ರೆಸ್ ಪಕ್ಷದ ಸಂಪಾಜೆ ವಲಯ ಅಲ್ಪಸಂಖ್ಯಾತ ಘಟಕದ ಸಭೆಯು ಅಧ್ಯಕ್ಷರಾದ ಎ.ಕೆ.ಹನೀಫ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಸಂಪಾಜೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆ ಹಾಕಿಕೊಳ್ಳಬೇಕಾದ ಕಾರ್ಯಯೋಜನೆಗಳ ಬಗ್ಗೆ ವಿಸ್ತ್ರತವಾದ ಚರ್ಚೆ ನಡೆಯಿತು.

ಸಭೆಯಲ್ಲಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿಯ ಮುಖ್ಯ ಸಂಯೋಜಕರಾದ ಕೆ.ಪಿ.ಜಾನಿ ,ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಶ್ರೀ ಮಹಮ್ಮದ್ ಕುಂಞಿ ಗೂನಡ್ಕ, ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ಉಪಾಧ್ಯಕ್ಷರಾದ ಎ.ಕೆ.ಇಬ್ರಾಹಿಂ, ಹಿರಿಯ ಕಾಂಗ್ರೆಸ್ ನಾಯಕರು ಮಾಜೀ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರೂ ಆದ ಹೆಚ್.ಹಮೀದ್ ಮಾಜೀ ಗ್ರಾಮ ಪಂ.ಸದಸ್ಯರಾದ ಬೆಂಜಮಿನ್ ಡಿಸೋಜ ವಲಯ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಲೂಕಾಸ್ .ಟಿ.ಐ. ತಾಜ್ ಮಹಮ್ಮದ್ ,ಮೈಕಲ್ ಪಾಯಸ್, ಮಹಮ್ಮದ್ ಕುಂಞಿ (ಉಪ್ಪಿ) ಸಿಲ್ವೆಸ್ಟರ್ ಡಿಸೋಜ ,ಕೆರೋಲಿನಾ ಕ್ರಾಸ್ತ ಅಲ್ಪಸಂಖ್ಯಾತ ಕಾಂಗ್ರೆಸ್ ಸಂಪಾಜೆ ವಲಯದ ಪ್ರದಾನ ಕಾರ್ಯದರ್ಶಿ ಸೆಬಾಸ್ಟಿಯನ್ ನೆಲ್ಲಿ ಕುಮೇರಿ, ಸಂಪಾಜೆ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆಯಾದ ಫಿಲೋಮಿನಾ ಕ್ರಾಸ್ತ, ಮತ್ತಿರರು ಉಪಸ್ತಿತರಿದ್ದರು.

ಲೂಕಾಸ್ ಟಿ.ಐ ಸ್ವಾಗತಿಸಿ ನಿರೂಪಿಸಿದರು. ಸೆಬಾಸ್ಟಿಯನ್ ನೆಲ್ಲಿಕುಮೇರಿ ವಂದಿಸಿದರು.