ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ನ.ಪಂ.ಸದಸ್ಯ ರಿಯಾಜ್ ಕಟ್ಟೆಕಾರ್ ಮನವಿ

ಸುಳ್ಯ ನಗರನ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಚರಂಡಿ ಸ್ಲ್ಯಾಬ್ ಹಾನಿಯಾಗಿದ್ದು ಸರಿಪಡಿಸುವಂತೆ ಸುಳ್ಯನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕಾರ್ ರವರು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
















ಸುಳ್ಯ ನಗರದ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿರುವ ಚರಂಡಿಯ ಸ್ಲ್ಯಾಬ್ ಭಾಗವು ಸುಮಾರು 50ರಿಂದ 60 ಅಡಿಗಳಷ್ಟು ಹಾನಿಯಾಗಿದೆ. ಇದರ ಪರಿಣಾಮವಾಗಿ ಪಾದಚಾರಿಗಳು ಮತ್ತು ವಾಹನ ಸವಾರರಿಗೆ ಸಂಚಾರದಲ್ಲಿ ತೊಂದರೆ ಉಂಟಾಗಿದೆ. ಮಳೆಗಾಲದಲ್ಲಿ ಈ ಭಾಗದಲ್ಲಿ ನೀರು ತುಂಬಿ ಅಪಘಾತ ಸಂಭವಿಸುವ ಅಪಾಯ ಹೆಚ್ಚಾಗಿದೆ.
ಆದ್ದರಿಂದ, ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರದ ದೃಷ್ಟಿಯಿಂದ, ಈ ಹಾನಿಗೊಂಡಿರುವ ಚರಂಡಿ ಸ್ಲ್ಯಾಬ್ ಭಾಗವನ್ನು ತುರ್ತು ಆಧಾರದ ಮೇಲೆ ದುರಸ್ತಿ ಮಾಡುವಂತೆ ವಿನಂತಿಸುತ್ತೇವೆ ಎಂದು ಅವರುಮನವಿ ಯಲ್ಲಿ ತಿಳಿಸಿದ್ದಾರೆ.










