ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ಅಧ್ಯಕ್ಷ ಹರೀಶ್ ಇಂಜಾಡಿಯವರಿಂದ ದೀಪ ಪ್ರಜ್ವಲನೆ
ಸುಳ್ಯ ಶ್ರೀ ರಾಮ ಪೇಟೆಯಲ್ಲಿರುವ ಶ್ರೀ ರಾಮ ಮಂದಿರದ 83 ನೇ ವರ್ಷದ ಏಕಾಹ ಭಜನೆಯು ಇಂದು ಪ್ರಾತ:ಕಾಲದಲ್ಲಿ ಆರಂಭಗೊಂಡಿತು.















ಬ್ರಹ್ಮಶ್ರೀ ವೇದಮೂರ್ತಿ ಪುರೋಹಿತ್ ನಾಗರಾಜ ಭಟ್ ರವರ ನೇತೃತ್ವದಲ್ಲಿ ಮಹಾಮಂಗಳಾರತಿಯಾಗಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ ಯವರು ಏಕಾಹ ಭಜನಾ ಸಂಕೀರ್ತನೆಯ ದೀಪ ಪ್ರಜ್ವಲಿಸಿ ಶುಭ ಹಾರೈಸಿದರು.

ಮಂದಿರದ ಅರ್ಚಕ ಹರ್ಷ ಕೃಷ್ಣ ಭಟ್ ಸಹಕರಿಸಿದರು.

ಈ ಸಂದರ್ಭದಲ್ಲಿ ಮಂದಿರದ ಧರ್ಮದರ್ಶಿ ಮಂಡಳಿಯ ಅಧ್ಯಕ್ಷರಾದ
ಕೆ. ಉಪೇಂದ್ರ ಪ್ರಭು, ಉಪಾಧ್ಯಕ್ಷ ಕೃಷ್ಣ ಕಾಮತ್, ಕಾರ್ಯದರ್ಶಿ ಶ್ರೀನಿವಾಸ್ ರಾವ್, ಜತೆ ಕಾರ್ಯದರ್ಶಿ ಮಹಾಬಲ ಯು. ಕೆ, ಸದಸ್ಯರಾದ ಗೋಪಾಲ ನಡುಬೖಲು, ಭಾಸ್ಕರ ನಾಯರ್, ಬಾಬುರಾಯ ಕಾಮತ್, ಬೆಳ್ಯಪ್ಪ ಗೌಡ, ಸೌಮ್ಯ ಭಾರಧ್ವಾಜ್, ವಾಸುದೇವ ನಾಯಕ್, ಬಂಗಾರು ಭಾರದ್ವಾಜ್ ಹಾಗೂ ಕಾರ್ಯಕಾರಿ ಸಮಿತಿ ಯ ಗಣೇಶ್ ಬಿ. ಎಸ್, ಗೋಪಾಲ ಆಚಾರ್ಯ,
ಜಿ. ಜಿ. ನಾಯಕ್, ಪ್ರಭಾಕರ ನಾಯರ್ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಸ್ಥಳೀಯ ಭಜಕರಿಂದ ಭಜನಾ ಸಂಕೀರ್ತನೆಯು ಆರಂಭಗೊಂಡಿತು.










