ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ತಂಡ ಅತ್ಲೆಟಿಕ್ಸ್ ನಲ್ಲಿ ಸಮಗ್ರ ಪ್ರಶಸ್ತಿ ಪಡೆದು ತಾಲೂಕಿಗೆ ಆಯ್ಕೆ

0

ಅ. 24ರಂದು ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ನಡೆದ ಬೆಳ್ಳಾರೆ ವಲಯ ಮಟ್ಟದ ಕ್ರೀಡಾಕೂಟದಲ್ಲಿ 14ರ ವಯೋಮಾನದ ಹುಡುಗರ ಸಮಗ್ರ ತಂಡ ಪ್ರಶಸ್ತಿ, 14ರ ವಯೋಮಾನದ ಹುಡುಗಿಯರ ಸಮಗ್ರ ತಂಡ ಪ್ರಶಸ್ತಿ, 17ರ ವಯೋಮಾನದ ಹುಡುಗರ ಸಮಗ್ರ ತಂಡ ಪ್ರಶಸ್ತಿ, 17ರ ವಯೋಮಾನದ ಹುಡುಗಿಯರ ಸಮಗ್ರ ತಂಡ ಪ್ರಶಸ್ತಿ ಗಳಿಸುವುದರೊಂದಿಗೆ ಎಲ್ಲಾ ವಿಭಾಗಗಳ ತಂಡ ಪ್ರಶಸ್ತಿಯನ್ನು ಪಡೆದು ಬಾಳಿಲ ವಿದ್ಯಾಬೋಧಿನೀ ವಿದ್ಯಾಸಂಸ್ಥೆ ಪಡೆದುಕೊಂಡಿದೆ.

ವೈಯಕ್ತಿಕ ಚಾಂಪಿಯನ್ 14ರ ವಿಭಾಗದ ಹುಡುಗರಲ್ಲಿ ಪ್ರತೀಕ್ 8 ನೇ ತರಗತಿ, 14ರ ಹುಡುಗಿಯರ ವಿಭಾಗದಲ್ಲಿ ಅಕ್ಷತಾ ಎಂಟನೇ ತರಗತಿ, 17ರ ಹುಡುಗರ ವಿಭಾಗದಲ್ಲಿ ಪ್ರೀತಮ್ ಪಿ ಮತ್ತು ಹವ್ಯಾಸ್ ಕೆ ಆರ್, 17ರ ಹುಡುಗಿಯರ ವಿಭಾಗದಲ್ಲಿ ಆಶಾಲತಾ ಎಸ್ ಪಡೆದುಕೊಂಡಿದ್ದಾರೆ. ತಾಲೂಕು ಮಟ್ಟದ ಕ್ರೀಡಾಕೂಟವು ರೋಟರಿ ವಿದ್ಯಾಸಂಸ್ಥೆ ಮಿತ್ತಡ್ಕದಲ್ಲಿ ನಡೆಯಲಿದ್ದು, ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ ಎಲ್ಲಾ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ತರತರಬೇತುಗೊಳಿಸಿದ ಶಿಕ್ಷಕರಿಗೆ ಹಾಗೂ ಸಹಕರಿಸಿದ ಎಲ್ಲಾ ಅಧ್ಯಾಪಕರುಗಳಿಗೆ ಶಾಲಾ ಆಡಳಿತ ಮಂಡಳಿ, ಎಸ್ ಡಿ ಎಂ ಸಿ, ರಕ್ಷಕ ಶಿಕ್ಷಕ ಸಮಿತಿ ಅಭಿನಂದನೆ ತಿಳಿಸಿದ್ದಾರೆ.