ಸುಳ್ಯದ ಶಾಸ್ತ್ರೀ ವೃತ್ತದಲ್ಲಿ ಆರ್. ಕೆ. ಗೆಳೆಯರ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವದ ಆಚರಣೆ

0

ನ. ಪಂ. ಸದಸ್ಯ
ಎಂ. ವೆಂಕಪ್ಪ ಗೌಡ ರಿಂದ ಕನ್ನಡದ ಧ್ವಜಾರೋಹಣ

ಸುಳ್ಯದ ಶಾಸ್ತ್ರೀ ವೃತ್ತದಲ್ಲಿ ಆರ್. ಕೆ ಗೆಳೆಯರ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವದ ಆಚರಣೆಯನ್ನು ನ. 1 ರಂದು ಆಚರಿಸಲಾಯಿತು.

ನಗರ ಪಂಚಾಯತ್ ಸದಸ್ಯ ನ್ಯಾಯವಾದಿ ಎಂ. ವೆಂಕಪ್ಪ ಗೌಡ ರವರು ಕನ್ನಡದ ದ್ವಜಾರೋಹಣ ನೆರವೇರಿಸಿದರು.
ಈ. ಸಂದರ್ಭದಲ್ಲಿ ಸ್ಥಳೀಯ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನಾಡ ಗೀತೆಯನ್ನು ಪ್ರಸ್ತುತ ಪಡಿಸಿದರು.


ನಗರ ಪಂಚಾಯತ್ ಸದಸ್ಯ ಧೀರ ಕ್ರಾಸ್ತ,ನಿವೃತ್ತ ಮುಖ್ಯ ಶಿಕ್ಷಕರಾದ ಗೋಪಾಲ ಎಸ್. ರಾವ್, ಆರ್. ಕೆ. ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಅರುಣ್ ಡಿ. ಸೋಜಾ ಕಂದಡ್ಕ, ಕಾರ್ಯದರ್ಶಿ ರಂಜಿತ್ ಜಯನಗರ, ಅಜಿತ್ ಬೀರಮಂಗಲ,ರಾಮಕೃಷ್ಣ ಅಲಂಕಲ್ಯ, ಉನೈಸ್ ಪೆರಾಜೆ, ಪದ್ಮನಾಭ ಹರ್ಲಡ್ಕ, ಅಶೋಕ, ಪ್ರಣೀತ್ ಕಣಕ್ಕೂರು, ಅಸಿಫ್, ದಿನೇಶ್, ಕುಶಾಲಪ್ಪ, ನವೀನ್, ರಾಕೇಶ್, ಶಾಲೆಯ ಶಿಕ್ಷಕ ರಾದ ಚಂದ್ರಶೇಖರ,
ಗೀತಾಂಜಲಿ, ಪುಣ್ಯಲತಾ ಮತ್ತಿತರರು ಭಾಗವಹಿಸಿದರು.
ಕಾರ್ಯದರ್ಶಿ ರಂಜಿತ್ ಕಾರ್ಯಕ್ರಮ ನಿರೂಪಿಸಿದರು.
ಆರ್. ಕೆ. ಪ್ರೆಂಡ್ಸ್ ಕ್ಲಬ್ ಸದಸ್ಯರು ಶಾಸ್ತ್ರೀ ವೃತ್ತವನ್ನು ಸ್ವಚ್ಛಗೊಳಿಸಿ ಬಣ್ಣ ಬಳಿದು ಕನ್ನಡದ ಧ್ವಜ ಅಳವಡಿಸಿ ಸಿಂಗರಿಸಿದರು.
ಈ ಸಂದರ್ಭದಲ್ಲಿ ಕನ್ನಡದ ಅಭಿಮಾನಿಗಳು ಭಾಗವಹಿಸಿದರು.
ಎಲ್ಲರಿಗೂ ಸಿಹಿ ತಿಂಡಿ ಹಂಚಿ ಶುಭಾಶಯ ಕೋರಲಾಯಿತು.