ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಆಯೋಜನೆಯಲ್ಲಿ ಸಂಪಾಜೆ ಯಕ್ಷೋತ್ಸವ ಆರಂಭ

0

ಸಂಪಾಜೆ ಡಾ‌.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ ಸಂಪಾಜೆ ಯಕ್ಷೋತ್ಸವ ಇಂದು ಮಧ್ಯಾಹ್ನ1 ಗಂಟೆಗೆ ಆರಂಭಗೊಂಡಿದೆ.


ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ಕುಶಲವ ಕಾಳಗ, ಕಂಸ ವಿವಾಹ, ಅಹಲ್ಯಾ ಶಾಪ, ಭಾರತ ರತ್ನ, ಸೈಂಧವ ವಧೆ, ವಿರೋಚನ ಕಾಳಗ ಪ್ರಸಂಗ ನಡೆಯಲಿದೆ.
ಇಂದು ಸಂಜೆ 6.30ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಯವರು ಆಶೀರ್ವಚನ ನೀಡಲಿದ್ದು, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಯಕ್ಷರಂಗದ ಹಲವಾರು ಸಾಧಕರಿಗೆ ಪ್ರಶಸ್ತಿ, ಪುರಸ್ಕಾರ ನಡೆಯಲಿದೆ.