ಕಾಂಗ್ರೆಸ್ ನಾಯಕ ಜಯಪ್ರಕಾಶ್ ರೈ ಯವರ ರಾಜೀನಾಮೆ ಅತ್ಯಂತ ದುರದೃಷ್ಟ ಕರ , ಅವರ ಈ ನಿರ್ಧಾರ ಪಕ್ಷಕ್ಕೆ ದೊಡ್ಡ ನಷ್ಟ ಎಂದು ಸುಳ್ಯ ದ ಹಿರಿಯ ಕಾಂಗ್ರೆಸ್ ಮುಖಂಡ ರಾಜಾರಾಂ ಭಟ್ ಬೆಟ್ಟ ಹೇಳಿದ್ದಾರೆ.















ಅವರು ಪಕ್ಷಕ್ಕೆ ಬಂದ ಬಳಿಕ ಸಂಪೂರ್ಣ ವಾಗಿ ಪಕ್ಷ ಸಂಘಟನೆ ಯಲ್ಲಿ ತೊಡಗಿಸಿಕೊಂಡಿದ್ಧರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಬಳಿಕ ಪಕ್ಷದಲ್ಲಿ ಶಿಸ್ತು, ಸಮಯ ಪಾಲನೆ ಗೆ ಮಹತ್ವ ಕೊಡುತಿದ್ದರು. ಎಷ್ಟೇ ದೊಡ್ಡ ನಾಯಕ ರು ಬಂದರೂ ತಾವು ಹೇಳಬೇಕಾದ್ದನ್ನು ನಿರ್ಭಿಡೆಯಿಂದ, ನೇರವಾಗಿ ಹೇಳಿ ವಿಷಯವನ್ನು ಮಂಡಿಸುತ್ತಿದ್ದರು. ಪಕ್ಷಕ್ಕೆ ಘನತೆ, ಗೌರವ ತಂದಿದ್ದರು. ಕಾರ್ಯಕರ್ತರ ಪ್ರೀತಿ, ವಿಶ್ವಾಸ ಗಳಿಸಿದ್ದರು.ಅವರ ಅರ್ಹತೆ ಸಾಮರ್ಥ್ಯ ವನ್ನು ಪಕ್ಷದ ಜಿಲ್ಲಾ, ರಾಜ್ಯ ನಾಯಕರು ಪರಿಗಣಿಸಿ ಸೂಕ್ತ ಸ್ಥಾನಮಾನ ನೀಡಬೇಕಿತ್ತು ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ










