ಪ್ರಜಾಧ್ವನಿ ಕರ್ನಾಟಕ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

0

ಪ್ರಜಾಧ್ವನಿ ಕರ್ನಾಟಕ ವತಿಯಿಂದ ಇಂದು ಸುಳ್ಯದ ಶಿವಕೃಪಾ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅಶೋಕ ಎಡಮಲೆ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಖ್ಯಾತ ವ್ಯಂಗ್ಯಚಿತ್ರಕಾರ ದಿನೇಶ್ ಕುಕ್ಕುಜಡ್ಕ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಧಾನ ಭಾಷಣ ಮಾಡಿದರು. ಅವರು ಮಾತನಾಡುತ್ತಾ, ಕನ್ನಡ ಭಾಷೆಯ ಬೆಳವಣಿಗೆಯ ದರ ಈಗ ಶೇಕಡಾ 3.73 ರಷ್ಟು ಮಾತ್ರ ಇದ್ದು, ಅದು ಇನ್ನಷ್ಟು ಕುಸಿಯದಂತೆ ಕನ್ನಡಿಗರು ಎಚ್ಚೆತ್ತುಕೊಂಡು ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಹೊರಬೇಕು. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳನ್ನು ನಮ್ಮ ಎಡ ಬಲಗಳಲ್ಲಿ ಹಾಗೂ ಮನೆಭಾಷೆ, ಆಡುಭಾಷೆಗಳನ್ನು ಅಂತರಂಗದಲ್ಲಿ ಇಟ್ಟುಕೊಂಡು ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ಪ್ರಾಚೀನ ಕಾಲದಿಂದ ಕನ್ನಡ ನಾಡಿನಲ್ಲಿ ಪ್ರಾದೇಶಿಕವಾಗಿ ಸುಮಾರು 230 ಉಪಭಾಷೆಗಳಿದ್ದವು, ಇವುಗಳಲ್ಲಿ ಕೆಲವು ಭಾಷೆಗಳು ನಶಿಸಿ ಹೋಗಿವೆ. ಒಂದು ಭಾಷೆ ನಶಿಸಿ ಹೋದರೆ ಅದರ ಜೊತೆಗೆ ಅಲ್ಲಿಯ ಸಂಸ್ಕೃತಿ ಮತ್ತು ನಾಗರಿಕತೆ ಕೂಡ ಅವಸಾನಗೊಳ್ಳುತ್ತದೆ. ಕನ್ನಡ ಭಾಷೆಯ ಉಳಿವು ಮತ್ತು ಸಮಗ್ರ ಬೆಳವಣಿಗೆಯಲ್ಲಿ ರಾಜ್ಯ ಶಿಕ್ಷಣ ನೀತಿಯ ಅನುಷ್ಠಾನ ಪ್ರಮುಖ ಪಾತ್ರ ವಹಿಸಬಲ್ಲುದು ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನೆಹರೂ ಸ್ಮಾರಕ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಪೂವಪ್ಪ ಕಣಿಯೂರುರವರು ಮಾತನಾಡಿ, ಕನ್ನಡ ಭಾಷೆಯ ಉಳಿವು, ಬೆಳವಣಿಗೆಗೆ ಮಕ್ಕಳಲ್ಲಿ ಭಾಷೆಯ ಬಗೆಗೆ ಹೃದಯವಂತಿಕೆಯನ್ನು ಬೆಳೆಸುವುದು ಹಿರಿಯರಾದ ನಮ್ಮ ಜವಾಬ್ದಾರಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಜಾಧ್ವನಿ ಗೌರವ ಸಲಹೆಗಾರರು ಗೋಪಾಲ್ ಪೆರಾಜೆ, ಸದಸ್ಯರಾದ ನ್ಯಾಯವಾದಿ ಕೆ. ಪಿ. ಮೋಹನ್ ಕಡಬರವರು ಕನ್ನಡಪರ ಸಂಘಟನೆಯ ಪ್ರಾಮುಖ್ಯತೆ ಹಾಗೂ ಕನ್ನಡ ನಾಡಿನ ಉದಯ, ಇತಿಹಾಸದ ಕುರಿತು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಜಾಧ್ವನಿ ಕರ್ನಾಟಕದ ಅಧ್ಯಕ್ಷ ಅಶೋಕ್ ಎಡಮಲೆಯವರು ಮಾತನಾಡಿ, ಪ್ರಜಾಧ್ವನಿ ಕರ್ನಾಟಕ ಸಂಘಟನೆಯ ಆಶಯಗಳ ಬಗ್ಗೆ, ಪ್ರಜಾಧ್ವನಿ ಮತ್ತು ಸಮಾಜದಲ್ಲಿ ಸಂವಿಧಾನ ಆಶಯ ಹಾಗೂ ಪ್ರಜಾಪ್ರಭುತ್ವ ಮಾದರಿ ರಾಷ್ಟ್ರೀಯತೆ ಬಗ್ಗೆ, ಯುವಕರ ತೊಡಗಿಸಿಕೊಳ್ಳುವಿಕೆಯ ಅವಶ್ಯಕತೆಯ ಬಗ್ಗೆ ವಿವರಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಪ್ರಜಾಧ್ವನಿ ಕರ್ನಾಟಕದ ಮಾಧ್ಯಮ ಕಾರ್ಯದರ್ಶಿ ಭರತ್ ಕುಕ್ಕುಜಡ್ಕ ಪ್ರಸ್ತಾವಿಕ ಮಾತುಗಳನ್ನಾಡಿ ಸಂಘಟನೆಯ ಉದ್ದೇಶ, ಕಾರ್ಯಚಟುವಟಿಕೆಗಳನ್ನು ವಿವರಿಸಿ ಕನ್ನಡ ಭಾಷೆಯ ಬೆಳವಣಿಗೆ ಸಾಗಿ ಬಂದ ದಾರಿಯ ಬಗ್ಗೆ ತಿಳಿಸಿದರು.

ಪ್ರಜಾಧ್ವನಿ ಕರ್ನಾಟಕದ ಸಂಸ್ಥಾಪಕ ಸದಸ್ಯ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿಯ ನಿರ್ದೇಶಕ ಕೆ. ಪಿ. ಜಾನಿ ಕಾರ್ಯಕ್ರಮದ ಮುಖ್ಯ ಅತಿಥಿಯ ಪರಿಚಯ ಮಾಡಿ ಮಾತನಾಡಿ ಸಮಾಜದಲ್ಲಿ ಸಂವಿಧಾನ ಆಶಯ, ಪ್ರಜಾಪ್ರಭುತ್ವ ಮಾದರಿ ರಾಷ್ಟ್ರೀಯತೆ ಬಗ್ಗೆ ಹಾಗೂ ಪ್ರಜಾಧ್ವನಿಯ ಪಾತ್ರದ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಯಾದ ದಿನೇಶ್ ಕುಕ್ಕುಜಡ್ಕ ಇವರನ್ನು ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಭೆಯಲ್ಲಿ ಪಿ. ಸಿ. ಜಯರಾಮ್, ಪಿ. ಎಸ್. ಗಂಗಾಧರ್, ರಾಧಾಕೃಷ್ಣ ಅರಂಬೂರು, ಕೆ. ಸಿ. ಹರೀಶ್ ಪೆರಾಜೆ, ಡಾ. ಎಸ್. ರಂಗಯ್ಯ, ಶಿವಶಂಕರ್ ಬಿಳಿನೆಲೆ, ಶಾಫಿ ಕುತ್ತಮೊಟ್ಟೆ, ರಶೀದ್ ಜಟ್ಟಿಪಳ್ಳ, ಅಬೂಬಕರ್ ಜಟ್ಟಿಪಳ್ಳ, ಶರತ್ ಅಂಬೆಕಲ್ಲು, ದಿವಾಕರ ಪೈ ಮಜಿಗುಂಡಿ, ಹಮೀದ್ ಅಡ್ಕಾರ್, ಮಹೇಶ್ ಬೆಳ್ಳಾರ್ಕರ್, ಕೇಶವ ಮೊರಂಗಲ್ಲು, ಕೆ. ಟಿ. ಭಾಗೀಶ, ಸಬಾಸ್ಟಿಯನ್ ಕ್ರಾಸ್ತಾ ಮಡಪ್ಪಾಡಿ, ಕೃಷ್ಣೇ ಗೌಡ ಎಂ. ಬಿ., ರವೀಂದ್ರ ಜಿ. ತೊಡಿಕಾನ, ಇಬ್ರಾಹಿಂ ಎ. ಕೆ., ಮಹಮ್ಮದ್ ಕುಂಞಿ ಗೂನಡ್ಕ, ಆನಂದ ಬೆಳ್ಳಾರೆ, ಮಂಜುನಾಥ ಮಡ್ತಿಲ, ಚೇತನ್ ಚಿಲ್ಪಾರ್, ಚೆನ್ನಕೇಶವ ಕೆ., ಶರೀಫ್ ಕಂಠಿ, ಇಕ್ಬಾಲ್ ಸುಣ್ಣಮೂಲೆ, ಅಶೋಕ್ ಚೂನ್ತಾರು, ಅಲೀನಾ ಕೆ. ಜಾನ್, ಜೋಬೆಲ್ ಕೆ. ಎ., ಅಮಯ ಕೆ. ಎ., ಏಬೆಲ್ ಕೆ. ಎ., ನಯಮ ಕ್ರಾಸ್ತಾ, ಸ್ಯಾಮ್ಸನ್ ಕ್ರಾಸ್ತಾ, ಶಿವಲಿಂಗಂ, ಕೆ. ಆರ್. ಲಲನ, ಲಿಸ್ಸಿ ಮೊನಾಲಿಸಾ, ಜೂಲಿಯಾನ ಕ್ರಾಸ್ತಾ, ಲೀಲಾವತಿ ಮೂಡೆಕಲ್ಲು, ಚೇತನ್ ಕಜೆಗದ್ದೆ, ಬಿ. ಸಿ. ಲೋಲಜಾಕ್ಷ, ಶಶಿಧರ ಎಂ. ಜೆ., ಭವಾನಿಶಂಕರ್ ಕಲ್ಮಡ್ಕ, ಇಬ್ರಾಹಿಂ, ಹರಿಶ್ಚಂದ್ರ ಪಂಡಿತ್, ಯುವಗಾಯಕ ಪವನ್ ಕೋಲ್ಚಾರ್, ಮಾಧವ ಸುಳ್ಯಕ್ಕೋಡಿ, ಕೆರೋಲಿನ್ ಜೆ. ಕ್ರಾಸ್ತಾ, ಕೊರಗಪ್ಪ ಕೊಯಿಲ ಉಪಸ್ಥಿತರಿದ್ದರು.

ಪ್ರಮೀಳಾ ಪೆಲತ್ತಡ್ಕ ಸ್ವಾಗತಿಸಿದರು. ನಗರ ಪಂಚಾಯತ್ ಸದಸ್ಯ ಉಮ್ಮರ್ ಕೆ. ಎಸ್. ಸಂವಿಧಾನ ಪೀಠಿಕೆಯನ್ನು ಸಭೆಯಲ್ಲಿದ್ದವರಿಗೆ ಬೋಧಿಸಿದರು. ಲ್ಯೂಕಾಸ್ ಟಿ. ಐ. ಕಾರ್ಯಕ್ರಮ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ವಸಂತ ಪೆಲತ್ತಡ್ಕ ಕಾರ್ಯಕ್ರಮ ನಿರ್ವಹಿಸಿದರು. ಸಾಹುಕಾರ್ ಅಶ್ರಫ್ ವಂದಿಸಿದರು.