
ಕನ್ನಡ ಸಾಹಿತ್ಯ ಪರಿಷತ್ ಮಡಿಕೇರಿ ತಾಲೂಕು, ಕನ್ನಡ ಸಾಹಿತ್ಯ ಪರಿಷತ್ ,ಹೋಬಳಿ ಘಟಕ ಸಂಪಾಜೆ ಮತ್ತು ಲಯನ್ಸ್ ಕ್ಲಬ್ ಸಂಪಾಜೆ, ಆಟೋ ಚಾಲಕ ಮಾಲಕರ ಸಂಘ, ಪಯಸ್ವಿನಿ ಯುವಕ ಸಂಘ, ನೇತಾಜಿ ಗೆಳೆಯರ ಬಳಗ ,ಶ್ರೀ ಭಗವಾನ್ ಸಂಘ, ಆದರ್ಶ ಫ್ರೆಂಡ್ಸ್ ಚಡಾವು, ಶ್ರೀ ಸಿರಾಡಿ ಪ್ರೆಂಡ್ಸ್ ಹೀಗೆ ಸಂಪಾಜೆ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸಂಪಾಜೆಯ ಗೇಟ್ ಬಳಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.



ಶ್ರೀಮತಿ ಇಂದಿರಾ ದೇವಿ ಪ್ರಸಾದ್ ಅವರು ಧ್ವಜಾರೋಹಣಗೈದು ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಲ. ಕಿಶೋರ್ ಕುಮಾರ್ ಕೆ ಅಧ್ಯಕ್ಷರು ಲಯನ್ಸ ಕ್ಲಬ್ ಸಂಪಾಜೆ, ಮಾತನಾಡುತ್ತಾ
“ಕನ್ನಡ ಶಾಲೆಗಳು ಉಳಿದಾಗ ಮಾತ್ರ ಕನ್ನಡ ಬೆಳೆಯಲು ಸಾದ್ಯ” ಎಂದರು ಮಾತ್ರವಲ್ಲ ಕನ್ನಡನಾಡು ‘ಕರ್ನಾಟಕವೆಂದು ಹೆಸರು ಪಡೆಯುವಂತಾದರ ಬಗ್ಗೆ ವಿವರಿಸಿದರು. ಕನ್ನಡ ಧ್ವಜ ಸ್ತಂಭದ ದಾನಿಗಳಾದ ಶ್ರೀಮತಿ ಲೀಲಾವತಿ ಊರು ಬೈಲ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.















ಕಾರ್ಯಕ್ರಮ ಸಂಘಟಕರು ಮತ್ತು ಕ ಸಾ ಪ ಹೋಬಳಿ ಘಟಕದ ಅಧ್ಯಕ್ಷ ಗೋಪಾಲ ಪೆರಾಜೆ ಕಾರ್ಯಕ್ರಮವನ್ನು ನಿರೂಪಿಸಿ ಎಲ್ಲರಿಗೂ ಶುಭವನ್ನು ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ರಮಾದೇವಿ ಬಾಲಚಂದ್ರ ಕಳಗಿ, ಸಂಪಾಜೆ
ಸುರೇಶ್, ರಿತಿನ್ ಡೆಮ್ಮಲೆ,ದೇವಪ್ಪ ಕೊಯನಾಡು, ತಿರುಮಲ ಸೋನ, ವಿವಿಧ ಸಂಘ-ಸಂಸ್ಥೆಗಳ ಸದಸ್ಯರುಗಳು ಹಾಜರಿದ್ದು ಕೊನೆಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.










