ಬ್ಲೆಸ್ಡ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಗುತ್ತಿಗಾರಿನಲ್ಲಿ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವನ್ನು ಆಚರಿಸ ಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಎಸ್. ಎಸ್. ಪಿ. ಯು. ಕಾಲೇಜು ಸುಬ್ರಮಣ್ಯ ಪ್ರೌಢ ಶಾಲಾ ವಿಭಾಗ ಇಲ್ಲಿನ ನಿವೃತ್ತ ಮುಖ್ಯಗುರುಗಳಾದ ಯಶವಂತ ರೈ ಭಾಗವಹಿಸಿ, “ಭಾಷೆಯ ಬಗ್ಗೆ ಹಿಡಿತ ಮತ್ತು ಸಂಸ್ಕಾರಯುತ ಜೀವನದಿಂದ ಗೆಲುವು ಸಾಧ್ಯ “ಎಂದು ಹೇಳಿದರು.
ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಸಂತೋಷ್ ಪಳಂಗಾಯ, ಸಂಗೀತ ತರಬೇತು ಶಿಕ್ಷಕಿ ಅನುಷಾ ಲಕ್ಷ್ಮೀ ಭಟ್, ಶಾಲಾ ಸಂಚಾಲಕಿ ಸಿಸ್ಟರ್ ಸಿಲ್ವಿಯಾ ರವರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ನಾಡಗೀತೆಯೊಂದಿಗೆ ಪ್ರಾರಂಭಿಸಲಾಯಿತು.















ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳಿಂದ ಸಾಂಸ್ಕೃತಿಕ ಮನೋರಂಜನ ನೃತ್ಯವನ್ನು ನಡೆಸಲಾಯಿತು. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸ್ಪರ್ಧಾ ಕಾರ್ಯಕ್ರಮಗಳಾದ, ಅಂದವಾದ ಬರವಣಿಗೆ, ಕನ್ನಡ ರಾಜ್ಯೋತ್ಸವ ಬಿತ್ತಿ ಚಿತ್ರ ತಯಾರಿ, ಕನ್ನಡ ನಾಡಗೀತೆ, ಕನ್ನಡ ಸಂಸ್ಕೃತಿ ಬಿಂಬಿಸುವ ಹಾಡು, ಸಾಮೂಹಿಕ ನೃತ್ಯ ಸ್ಪರ್ಧೆಯನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿ ಶ್ರೀಮತಿ ಉಷಾ ರವರು ಸ್ವಾಗತಿಸಿ, ಸಹ ಶಿಕ್ಷಕಿ ಶ್ರೀಮತಿ ಚೈತ್ರ ರವರು ವಂದಿಸಿ, ಪ್ರೌಢ ಶಾಲಾ ಕನ್ನಡ ಭಾಷಾ ಶಿಕ್ಷಕಿ ಶಾಂತ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.











