ಗಾಂಧಿನಗರ ಕೆಪಿಎಸ್ ನಲ್ಲಿ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘದ ಚುನಾವಣೆ

0

ಮತದಾನದಲ್ಲಿ ಭಾಗವಹಿಸುತ್ತಿರುವ ಸದಸ್ಯರುಗಳು

ಒಟ್ಟು 13 ಸ್ಥಾನಕ್ಕೆ 14 ಮಂದಿ ಅಭ್ಯರ್ಥಿಗಳು ಕಣದಲ್ಲಿ

ಸುಳ್ಯ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ನವಂಬರ್ 2 ರಂದು ಇಂದು ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಡೆಯುತ್ತಿದೆ.

ಸಾಮಾನ್ಯ/ಪ.ಜಾತಿ/ಪ.ಪಂಗಡ/ಹಿಂದುಳಿದ ವರ್ಗ ಪ್ರವರ್ಗ ‘ಎ’ ಮತ್ತು ‘ಬಿ’ ಹಾಗೂ ಮಹಿಳೆಯರಿಗೆ ಮೀಸಲಿರಿಸಿದ ಸ್ಥಾನಗಳಿಗೆ ಈಗೆ ಒಟ್ಟು 15 ಸ್ಥಾನಗಳಿದ್ದು ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಪಂಗಡದ ಸ್ಥಾನಕ್ಕೆ ಯಾವುದೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದೆ ಇರುವ ಕಾರಣ 13 ಸ್ಥಾನಗಳಿಗೆ 14 ಮಂದಿ ಕಣದಲ್ಲಿದ್ದು ಮತದಾನ ನಡೆಯುತ್ತಿದೆ.

ಸಾಮಾನ್ಯ 9, ಮಹಿಳಾ ಮೀಸಲು 2 ಪ್ರವರ್ಗ ಎ 1 ಪ್ರವರ್ಗ ಬಿ 1. ಒಟ್ಟು 13 ಸ್ಥಾನಗಳಿಗೆ ಸದಸ್ಯರ ಆಯ್ಕೆ ನಡೆಯಲಿದೆ. ಪ್ರ ಪ್ರವರ್ಗ ಎ ಇಕ್ಬಾಲ್ ಎಲಿಮಲೆ ಪ್ರವರ್ಗ ಬಿ ಜಾರ್ಜ್ ಡಿಸೋಜ ಅವಿರೋಧವಾಗಿ ಆಯ್ಕೆಗೊಂಡಿದ್ದು
ಸಾಮಾನ್ಯ ಕ್ಷೇತ್ರದಿಂದ ಮಹಮ್ಮದ್ ರಿಯಾಜ್ ಗುರುಂಪು.ಎಸ್.ಎಂ ಬಾಪು ಸಾಹೇಬ್ ಅರಂಬೂರು ,ಅಬ್ದುಲ್ ರಹಿಮಾನ್ ಮೇನಾಲ,ಹಸೈನಾರ್ ಎ ಕೆ ಕಲ್ಲುಗುಂಡಿ, ಮಹಮ್ಮದ್ ರಫೀಕ್ ಸಿಎಂ ಐವತ್ತೊಕ್ಲು, ಕೆ ಬಿ ಇಬ್ರಾಹಿಂ ಮಂಡೆಕೋಲು, ಮುಹಿಯದ್ದೀನ್ ಹಾಜಿ ಕೆ ಎಂ ನಾವೂರು, ಬಿ ಉಮ್ಮರ್ ಕಲ್ಲುಮುಟ್ಲು, ಮಹಮ್ಮದ್ ಅನ್ಸಾರ್ ಬೆಳ್ಳಾರೆ, ಅಬೂಬಕ್ಕರ್ ಸಿದ್ದೀಕ್ ಜಿ ಜೀರ್ಮುಖಿ, ಮಹಮ್ಮದ್ ಪೈಸಲ್ ಜೀರ್ಮುಖಿ, ಎಸ್ ಸಂಶುದ್ದೀನ್ ಅರಂಬೂರು, ಮಹಮ್ಮದ್ ಶರೀಫ್ ಎಂ ಕೆ ನಾವೂರು,ಮೊಹಮ್ಮದ್ ಹನೀಫ್ ಎಸ್ ಕೆ ಸಂಪಾಜೆ,
ಮಹಿಳಾ ಮೀಸಲು ಸ್ಥಾನಕ್ಕೆ ಶ್ರೀಮತಿ.ಅಮಿನಾ ಎಸ್ ಮಿಲಿಟರಿ ಗ್ರೌಂಡ್, ಶ್ರೀಮತಿ ಸಾಜಿದಾ ಜಿ ಎ, ಶ್ರೀಮತಿ ಜೂಲಿಯಾನ ಕ್ರಾಸ್ತಾ ಬೀರಮಂಗಲ, ಶ್ರೀಮತಿ ಅಫೋಲಿನ್ ಡಿಸೋಜಾ ಇವರುಗಳಲ್ಲಿ ಎರಡು ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.


ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳು ಮತ ಬೂತಿನ ಪರಿಸರದಲ್ಲಿ ಮತದಾನಕ್ಕೆ ಬರುವ ಸದಸ್ಯರುಗಳಲ್ಲಿ ವಿನಂತಿಸಿಕೊಳ್ಳುತ್ತಿದ್ದಾರೆ.
ಬೂತಿನ ಬಳಿ ಪೊಲೀಸ್ ಸಿಬ್ಬಂದಿಗಳು,ಸಂಘದ ಸಿಬ್ಬಂದಿಗಳು, ಚುನಾವಣಾ ಅಧಿಕಾರಿಗಳು ಉಪಸ್ಥಿತರಿದ್ದಾರೆ.