ಕುಕ್ಕೆಯಲ್ಲಿ ಬೀದಿ ದೀಪಗಳ ರಿಪೇರಿ ಪ್ರಗತಿಯಲ್ಲಿ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಚಂಪಾ ಷಷ್ಠಿ ಜಾತ್ರಾ ಮಹೋತ್ಸವ ಇದೇ ನವಂಬರ್ 14 ರಿಂದ ಮೂಲ ಮೃತ್ತಿಗೆ ಪ್ರಸಾದ ತೆಗೆಯುವುದರೊಂದಿಗೆ ಆರಂಭ ವಾಗಿ ಮರುದಿನ ನವೆಂಬರ್ 15 ರಂದು ಕೊಪ್ಪರಿಗೆ ಏರುವುದ ರೊಂದಿಗೆ ಜಾತ್ರೋತ್ಸವಕ್ಕೆ ಚಾಲನೆ ದೊರೆಯಲಿರುವುದು. ಜಾತ್ರೋತ್ಸವಕ್ಕೆ ಬಹಳಷ್ಟು ಕೆಲಸ ಕಾರ್ಯಗಳು ಶ್ರೀ ದೇವಳದ ವತಿಯಿಂದ ಆಗಬೇಕಾಗಿದ್ದು ಇದೀಗ ಕುಮಾರ ದಿಂದ ರಥಬೀದಿಯಾಗಿ ಶ್ರೀದೇವಳ ಹಾಗೂ ಪಾರ್ಕಿಂಗ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬೀದಿ ದೀಪಗಳ ರಿಪೇರಿ ಕೆಲಸ ಪ್ರಗತಿಯಲ್ಲಿ ಇರುತ್ತದೆ. ಪಾರ್ಕಿಂಗ್ ಜಾಗದಲ್ಲಿ ಸಮತಟ್ಟು ಮಾಡುವ ಕೆಲಸ, ತಾತ್ಕಾಲಿಕ ಶೌಚಾಲಯಗಳು, ವಿಶ್ರಾಂತಿ ತಾಣಗಳು,ತಾತ್ಕಾಲಿಕ ಆರೋಗ್ಯ ಕೇಂದ್ರ, ಕುಮಾರಧಾರ ದಿಂದ ರಥಬೀದಿಯಾಗಿ ಶ್ರೀ ದೇವಳದವರೆಗೆ ಎರಡು ಬದಿಗಳಲ್ಲಿ ಇರುವ ಹುಲಸಾಗಿ ಬೆಳೆದಿರುವ ಗಿಡ ಗಂಟೆಗಳು, ಹುಲ್ಲು, ಕಸ ಕಡ್ಡಿಗಳು, ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ಚೀಲ, ಹಾಗೂ ಇನ್ನಿತರ ಕೊಚ್ಚೆ ವಸ್ತುಗಳನ್ನ ಸ್ವಚ್ಛಗೊಳಿಸುವ ಹಾಗೂ ಸುಂದರಗೊಳಿಸುವ ಕೆಲಸಗಳು ಇನ್ನಷ್ಟು ಆಗಬೇಕಾಗಿದೆ. ಇನ್ನು ಜಾತ್ರೆಗೆ ಕೇವಲ ಎರಡು ವಾರಗಳು ಇರುವುದರಿಂದ ಕೆಲಸ ಕಾರ್ಯಗಳು ನಿಧಾನವಾಗದೆ ಶೀಘ್ರ ಆಗಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.