ಎಲ್ಲಿ ಸ್ವಚ್ಛತೆ ಇದೆಯೋ, ಅಲ್ಲಿ ದೇವರ ಸಾನಿಧ್ಯಯಿದೆ: ಡಾ. ಶಿವಕುಮಾರ ಹೊಸೋಳಿಕೆ

0


ಕುಕ್ಕೆ ಸ್ಥಾನಘಟ್ಟದ ಬಳಿ ಸ್ವಚ್ಛತಾ ಅಭಿಯಾನ


ಕುಕ್ಕೆ ಸ್ಥಾನಘಟ್ಟದ ಬಳಿ ಸ್ವಚ್ಛತಾ ಅಭಿಯಾನ ನಡೆಯಿತು.


ಕುಕ್ಕೆ ಸುಬ್ರಹ್ಮಣ್ಯ ನಾಗರಾಧನೆಯಾಲ್ಲಿ ಇಡೀ ಪ್ರಪಂಚದಲ್ಲಿ ಪ್ರಸಿದ್ಧಿ ಪಡೆದಿದೆ. ಇಲ್ಲಿಗೆ ದಿನನಿತ್ಯ ಸಾವಿರಾರು ಭಕ್ತ ಭಕ್ತಾದಿಗಳು ಊರ ಪರ ಊರುಗಳಿಂದ ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಸಂತೃಪ್ತಿ ಹೊಂದುತ್ತಾರೆ. ವಿವಿಧ ರೀತಿಯ ಅನಾರೋಗ್ಯ ಕಾಯಿಲೆಗಳು, ಸಂತಾನ ಭಾಗ್ಯ, ಮದುವೆ, ಕೃಷಿ, ವ್ಯಾಪಾರ ದಲ್ಲಿ ಏನಾದರೂ ತೊಂದರೆ ಬಂದವರು ಇಲ್ಲಿಗೆ ಹರಕೆ ಹೇಳಿ ಅದೆಷ್ಟು ಮಂದಿ ಬಂದು ಸೇವೆಯನ್ನು ತೀರಿಸಿ ಸಫಲತೆಯನ್ನ ಕಂಡಿದ್ದಾರೆ.
ಇಂತಹ ಕ್ಷೇತ್ರದಲ್ಲಿ ಎಲ್ಲಾ ಕಡೆ ಸ್ವಚ್ಛತೆ ಇರಬೇಕಾಗಿದ್ದು ಭಕ್ತಾದಿಗಳು ಎಲ್ಲೆಂದರಲ್ಲಿ ಕಸ ಕಡ್ಡಿ ಪ್ಲಾಸ್ಟಿಕ್ ಬಾಟ್ಲುಗಳು ಇತ್ಯಾದಿಗಳನ್ನು ಕಂಡುಬಂದಿದೆ. ಇಲ್ಲಿಯ ಡಾ. ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ಅವರು ಪ್ರತಿವಾರ ತನ್ನ ೫೦-೬೦ ಸ್ವಯಂಸೇವಕರು ಹಾಗೂ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ನ ಸಹ ಯೋಗದೊಂದಿಗೆ ಸ್ವಚ್ಛತಾ ಕಾರ್ಯವನ್ನ ಕೈಗೊಳ್ಳುತ್ತಿರುವುದು ಶ್ಲಾಘನೀಯ. ಎಲ್ಲಿ ಸ್ವಚ್ಛತೆ ಇದೆಯೋ ಅಲ್ಲಿ ದೇವರ ಸಾನಿಧ್ಯ ಖಂಡಿತ ಇದೆ ಎಂದವರು ನುಡಿದರು.

ಈ ಸಂದರ್ಭದಲ್ಲಿ ರವಿಕಕ್ಕೆ ಬದ್ಧವು ಸಮಾಜ ಸೇವಾ ಟ್ರಸ್ಟ್ ಸಂಸ್ಥಾಪಕ ಡಾ. ರವಿ ಕಕ್ಕೆಪದವ್, ಸುಬ್ರಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ, ಕಾರ್ಯದರ್ಶಿ ಗೋಪಾಲ ಎಣ್ಣೆ ಮಜಲ್, ರವಿ ಕಕ್ಕೆ ಪದವ್ ಸಮಾಜ ಸೇವ ಟ್ರಸ್ಟಿನ ನಾಯಕರು ಹಾಗೂ ಸ್ವಯಂಸೇವಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.