ವಳಲಂಬೆಯಲ್ಲಿ ನ.16 ರಂದು ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ

0

ಆಮಂತ್ರಣ ಪತ್ರಿಕೆ ಬಿಡುಗಡೆ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ. 16ರಂದು ಪಂಜ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ಅದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನ.2 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಈ ಸಂದರ್ಭ ಸಂಘಟನಾ ಸಮಿತಿಯ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಪಂಜ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ, ರಾಮಚಂದ್ರ ಪಳಂಗಾಯ, ಪ್ರಭಾಕರ ಕಿರಿಭಾಗ, ಕುಶಾಲಪ್ಪ ತುಂಬತ್ತಾಜೆ, ಲೋಕೇಶ್ವರ ಡಿ.ಆರ್, ವಿಜಯ ಕುಮಾರ್ ಎಂ ಡಿ, ಯೋಗೀಶ್ ಹೊಸೋಳಿಕೆ, ದಿನೇಶ್ ಹಾಲೆಮಜಲು, ಹರಿಶ್ಚಂದ್ರ ಕೇಪ್ಲಕಜೆ, ಮಾಧವ ಮೂಕಮಲೆ, ಬಿಟ್ಟಿ ಬಿ ನೆಡುವೀಲಂ, ರೂಪವಾಣಿ ಮತ್ತಿತರರು ಉಪಸ್ಥಿತರಿದ್ದರು