ರಕ್ಷಣೆ ನೀಡುವಂತೆ ಅಪರ ಜಿಲ್ಲಾಧಿಕಾರಿಗಳಿಗೆ ದೂರು
ದೇವಚಳ್ಳ ಗ್ರಾಮದ ಕಂದ್ರಪಾಡಿ ಎಂಬ ಸ್ಥಳದಲ್ಲಿ ಪ್ರಾಚೀನ ಜೈನ ಬಲ್ಲಾಳರಿಂದ ನಿರ್ಮಿಸಲ್ಪಟ್ಟ ಬಸದಿಯನ್ನು ಜೆಸಿಬಿ ಬಳಸಿ ನೆಲಸಮ ಮಾಡಿದ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ ಜೈನ ಮುಖಂಡರು ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ನೀಡಿ ಸೂಕ್ತ ರಕ್ಷಣೆ ನೀಡುವಂತೆ ದೂರು ನೀಡಿದರು.
ಸೆ.29 ರಂದು ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಬಂದ ವರದಿ ನೋಡಿ ಪುತ್ತೂರಿನ ಜೈನ ಬಾಂಧವರು ಕಂದ್ರಪ್ಪಾಡಿಯಲ್ಲಿ ಪರಿಶೀಲನೆ ನಡೆಸಿ, ನೆಲ ಸಮ ಮಾಡಿದ ಬಗ್ಗೆ ಊರಿನ ಪ್ರಮುಖರು ನಡೆಸಿದ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸ್ಥಳೀಯ ವ್ಯಕ್ತಿ ಪ್ರಾಚೀನ ಕುರುಹುಗಳನ್ನು ನೆಲಸಮ ಮಾಡಿ ಕ್ಷೇತ್ರ ಪಾಲನ ಗುಡಿ ನಾಗನ ಕಲ್ಲು ಮತ್ತು ಆನೆ ಮೆಟ್ಟಿಲು, ಗರ್ಭಗುಡಿಯ ಶಿಲಾಮಯ ಕಲ್ಲುಗಳನ್ನು ನೆಲಸಮ ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳೀಯರು, ಕಂದ್ರಪ್ಪಾಡಿ ಪುರುಷ ದೈವದ ಜೀರ್ಣೋದ್ದಾರ ಸಮಿತಿಯವರು ಸಭೆ ನಡೆಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ನಿರ್ಧರಿಸಿ, ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದರು.















ಈ ಸಂದರ್ಭದಲ್ಲಿ ಪುತ್ತೂರಿನ ವಿಕೆ ಜೈನ್- ಸತೀಶ್ ಪಡಿವಾಳ್ -ಸುಳ್ಯ ಬಲ್ನಾಡು ಪೇಟೆಯ ಡಾ. ಪ್ರಭಾತ್ ಬಲ್ನಾಡು ಮಂಗಳೂರು ಜೈನ್ ಮಿಲನ್ ಅಧ್ಯಕ್ಷರಾದ ರತ್ನಾಕರ ಜೈನ್ ಉಪಾಧ್ಯಕ್ಷರಾದ ಮಹಾವೀರ್ ಪ್ರಸಾದ್ ಮೂಡುಬಿದರೆ ಜೈನ್ ಮಿಲನ್ ಅಧ್ಯಕ್ಷರಾದ ಮಹೇಂದ್ರ ಕುಮಾರ್ ಜೈನ್ ಮತ್ತು ಅನಂತವೀರ್ ಮುಂತಾದವರು ಸುಳ್ಯ ಬೆಳ್ತಂಗಡಿ ಪುತ್ತೂರು ಮಂಗಳೂರು ಕಾರ್ಕಳ ಬಂಟ್ವಾಳದ ಜೈನ ಬಾಂಧವರು ಉಪಸ್ಥಿತರಿದ್ದರು.
ಇದೇ ಸಂದರ್ಭ ಮೂಡಬಿದ್ರೆ ಶ್ರೀ ಜೈನ ಮಠದ ಜಗದ್ಗುರು ಡಾ. ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿಯವರು ದೂರವಾಣಿ ಮೂಲಕ ಅಪರ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಸ್ಥಳಕ್ಕೆ ರಕ್ಷಣೆ ನೀಡುವಂತೆ ಆಗ್ರಹಿಸಿದರು.










