ರೈತ ಯುವಕ ಮಂಡಲ ಏನೆಕಲ್ಲು ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ರೈತ ಹಬ್ಬ ಕಾರ್ಯಕ್ರಮ ಅ. 20 ರಂದು ಏನೆಕ್ಕಿನ ಅರ್ಪಣಾ ಕ್ರೀಡಾಂಗಣದಲ್ಲಿ ನಡೆಯಿತು.
ಏನೆಕಲ್ ನ ಗ್ರಾಮಸ್ಥರಿಗಾಗಿ ಹಲವು ಕ್ರೀಡಾಕೂಟದ ಜೊತೆ ಮನೋರಂಜನಾ ಆಟೋಟ ಸ್ಪರ್ಧೆಗಳು ನಡೆಯಿತು.















ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷರಾದ ಜೀವಿತ್ ಪರಮಲೆ ವಹಿಸಿದ್ದರು.
ಒಕ್ಕಲಿಗ ಗೌಡ ಸೇವಾ ಸಂಘ ಕಡಬ ಅಧ್ಯಕ್ಷರಾದ ಸುರೇಶ್ ಬೈಲು ಸಮಾರಂಭವನ್ನು ಉದ್ಘಾಟಿಸಿದರು.
ಯುವಕ ಮಂಡಲದ ಕಾರ್ಯದರ್ಶಿ ಅಶೋಕ್ ಅಂಬೆಕಲ್ಲು ಅವರು ಪ್ರಾಸ್ತಾವಿಕದ ಜೊತೆಗೆ ಎಲ್ಲರನ್ನು ಸ್ವಾಗತಿಸಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿಯ ಧಾರ್ಮಿಕ ಮುಖಂಡರಾದ ಕಿರಣ್ ಪುಷ್ಪಗಿರಿ,
ಯುವಕ ಮಂಡಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಮಲ್ಲಾರ,
ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಅಶೋಕ್ ನೆಕ್ರಾಜೆ,
ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಭರತ್ ನೆಕ್ರಾಜೆ,
ಕರ್ನಾಟಕ ರಾಜ್ಯ ಅರೆಭಾಷೆ ಅಕಾಡೆಮಿಯ ಪೂರ್ವಾಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ,
ಮಹಾ ಮೃತ್ಯುಂಜೇಶ್ವರ ಶಿವಪಾರ್ವತಿ ಟ್ರಸ್ಟ್ ನಡುಗಲ್ಲು ಅಧ್ಯಕ್ಷರಾದ ರಾಮಚಂದ್ರ ಭಟ್,
ಕೆ.ಎಂ.ಎಪ್ ಮಂಗಳೂರು ಇದರ ಸಹಾಯಕ ವ್ಯವಸ್ಥಾಪಕರಾದ ಸಚಿನ್ ಚಿದ್ಗಲ್,
ಸ. ಹಿ, ಪ್ರಾ ಶಾಲೆ ಏನೆಕಲ್ಲು ಇದರ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಕುಮಾರ್ ಪುರ್ಲುಪ್ಪಾಡಿ,
ಆದಿಶಕ್ತಿ ಭಜನಾ ಮಂದಿರದ ಅಧ್ಯಕ್ಷರಾದ ಲಕ್ಷ್ಮಣ ಸಂಕಡ್ಕ ಉಪಸ್ತಿತರಿದ್ದರು.
ಗೌರವ ಉಪಸ್ಥಿತಿಯಾಗಿ ಮಾಗಣೆ ಗೌಡರಾದ ಉದಯಕುಮಾರ್ ಬಾನಡ್ಕ ಹಾಗೂ ಊರು ಗೌಡರು ಮತ್ತು ಅಯ್ಯಪ್ಪ ಸ್ವಾಮಿ ಮಂದಿರದ ಸೇವಕರ್ತರಾದ ಕೃಷ್ಣಪ್ಪ ಬಜ್ಜಿನಡ್ಕ ವೇದಿಕೆಯಲ್ಲಿದ್ದರು.
ಗ್ರಾಮಸ್ಥರೆಲ್ಲ ಒಂದೇ ಸೂರಿನಡಿ ಸೇರಿ ಕ್ರೀಡಾಕೂಟದ ಮೂಲಕ ರೈತರಿಗೆ ಗೌರವ ಸೂಚಿಸುವ ಸಲುವಾಗಿ ಹಬ್ಬವನ್ನು ರೈತ ಹಬ್ಬವಾಗಿ ಆಚರಿಸಿದರು. ಈ ಸಮಾರಂಭದಲ್ಲಿ ಸರಕಾರಿ ನಿವೃತ ಮತ್ತು ವಿಶೇಷ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಕೂಡ ಮಾಡಲಾಯಿತು.










