ನಾಳೆ ಸುಳ್ಯಕ್ಕೆ ಆಗಮಿಸಲಿದೆ ಬೆಳ್ಳಿರಥ

ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಡಾ.ಕೆ.ವಿ.ರೇಣುಕಾಪ್ರಸಾದ್ ಮತ್ತು ಮನೆಯವರು ಸೇವಾ ರೂಪದಲ್ಲಿ ನೀಡುತ್ತಿರುವ ಬೆಳ್ಳಿರಥಕ್ಕೆ ಕೋಟೇಶ್ವರದಲ್ಲಿ ಗುತ್ತಿಪೂಜಾ ಕಾರ್ಯಕ್ರಮ ನಡೆಯಿತು.

ಬಳಿಕ ರಥವನ್ನು ರಥಶಿಲ್ಪಿಗಳು ಡಾ.ರೇಣುಕಾಪ್ರಸಾದ್ ಮತ್ತು ಮನೆಯವರಿಗೆ ಬಿಟ್ಟುಕೊಡುವ ಕಾರ್ಯ ನಡೆಯಿತು.
















ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುಳ್ಯದಿಂದ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸಮಾಜದ ಪ್ರಮುಖರು, ಕುರುಂಜಿ ಕುಟುಂಬಸ್ಥರು, ಡಾ.ರೇಣುಕಾಪ್ರಸಾದ್ ಆಡಳಿತದ ಸಂಸ್ಥೆಗಳ ಸಿಬ್ಬಂದಿಗಳು ಸೇರಿದಂತೆ ಹಲವರು ಭಾಗವಹಿಸಿದ್ದಾರೆ.
ನಾಳೆ ಬೆಳಗ್ಗೆ ಪೂಜೆ ನಡೆದು ಬೆಳ್ಳಿರಥಯಾತ್ರೆ ಸುಳ್ಯದತ್ತ ಹೊರಡಲಿದೆ.











