
ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ ನಿರ್ದೇಶಕರಾದ ನಿಶ್ಮಿತಾ ಗ್ಯಾರೇಜ್ ಮಾಲಕ ಬಾಲಕೃಷ್ಣ ರವರ ತಂದೆ ಡೊಂಬ ಗೌಡರಿಗೆ 104 ವರ್ಷ ತುಂಬಿದ ಹೊಸ್ತಿಲಲ್ಲಿ ಶತಾಯುಷಿ ಯವರನ್ನು ಅವರ ತರವಾಡು ಮನೆ ಬೆಳ್ತಂಗಡಿಯ
ಕಡಿರುದ್ಯಾವರಕ್ಕೆ ತೆರಳಿ ಸಂಘದ ವತಿಯಿಂದ ನ.2 ರಂದು ಸನ್ಮಾನಿಸಲಾಯಿತು.















ಹಿರಿಯ ಸದಸ್ಯರಾದ ಐಡಿಯಲ್ ಭಾಸ್ಕರಗೌಡ, ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ, ಗೌರವಾಧ್ಯಕ್ಷ ಜನಾರ್ಧನ ದೋಳ ಹಾಗೂ ಪದಾಧಿಕಾರಿಗಳು, ಸದಸ್ಯರು, ಬೆಳ್ತಂಗಡಿ ವಲಯದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದೊಂಬ ಗೌಡ ದಂಪತಿ ಯವರ ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು,
ಮರಿಮಕ್ಕಳು ಮತ್ತು ಬಂಧುಗಳಿದ್ದರು.










